ಮುಂಬೈ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ (Government Hospital) ದಾಖಲಾಗಿದ್ದ ರೋಗಿಯೊಬ್ಬ (Patient) ಚಿಕಿತ್ಸೆ ನೀಡಲು ಬಂದ ವೈದ್ಯರಿಗೆ (Doctor) ಚಾಕುವಿನಿಂದ ಇರಿದಿರುವ (Stabbing) ಘಟನೆ ಮಹಾರಾಷ್ಟ್ರದ (Maharashtra) ಯವತ್ಮಾಲ್ ಜಿಲ್ಲೆಯ ಶ್ರೀ ವಸಂತರಾವ್ ನಾಯಕ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಹಲ್ಲೆ ನಡೆಸಿದ ವ್ಯಕ್ತಿ ಬುಧವಾರ ತನಗೆ ತಾನೇ ಚಾಕುವಿನಿಂದ ಇರಿದು ಆಸ್ಪತ್ರೆ ದಾಖಲಾಗಿದ್ದ. ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ದಾಖಲಾಗಿದ್ದ ವ್ಯಕ್ತಿ ಗುರುವಾರ ರಾತ್ರಿ ತನ್ನನ್ನು ಪರೀಕ್ಷಿಸಲು ಬಂದಿದ್ದ ವೈದ್ಯನಿಗೆ ಚಾಕುವಿನಿಂದ ಇರಿದಿದ್ದಾನೆ. ಅವರನ್ನು ರಕ್ಷಿಸಲು ಮುಂದಾದ ಮತ್ತೊಬ್ಬ ವೈದ್ಯರ ಮೇಲೂ ರೋಗಿ ಹಲ್ಲೆ ನಡೆಸಿದ್ದಾನೆ.
Advertisement
Advertisement
ವರದಿಗಳ ಪ್ರಕಾರ, ಹಣ್ಣುಗಳನ್ನು ಕತ್ತರಿಸಲು ಪಕ್ಕದಲ್ಲಿಟ್ಟಿದ್ದ ಚಾಕುವಿನಿಂದ ವ್ಯಕ್ತಿ ಹಲ್ಲೆ ನಡೆಸಿದ್ದಾನೆ. ಆತನನ್ನು ಪರೀಕ್ಷಿಸಲು ವೈದ್ಯರೊಬ್ಬರು ಬಂದಿದ್ದು, ಈ ವೇಳೆ ಹಣ್ಣು ತಿನ್ನಲು ಬಯಸುತ್ತೀರಾ? ಎಂದು ಕೇಳಿದ್ದಾರೆ. ಬಳಿಕ ತನಗೆ ತಾನೇ ಇರಿದುಕೊಂಡಿರುವ ಗಾಯವನ್ನು ಪರೀಕ್ಷಿಸಲು ವೈದ್ಯ ಮುಂದಾದಾಗ ಆತ ನಿರಾಕರಿಸಿದ್ದಾನೆ. ಬಳಿಕ ಆತ ಚಾಕುವಿನಿಂದ ವೈದ್ಯನಿಗೆ ಇರಿದಿದ್ದಾನೆ. ಇದನ್ನೂ ಓದಿ: ಚಾಮುಂಡಿಬೆಟ್ಟದ ಸಮೀಪ 50ಕ್ಕೂ ಹೆಚ್ಚು ಮಂದಿ ಪ್ರವಾಸಿಗರಿದ್ದ ಬಸ್‍ನಲ್ಲಿ ಬೆಂಕಿ!
Advertisement
ಇದನ್ನು ಗಮನಿಸಿದ ಮತ್ತೊಬ್ಬ ವೈದ್ಯ ಅವರನ್ನು ರಕ್ಷಿಸಲು ಬಂದಾಗ ಅವರ ಮೇಲೂ ವ್ಯಕ್ತಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದಿದ್ದಾರೆ.
Advertisement
ಹಲ್ಲೆ ನಡೆಸಿರುವ ವ್ಯಕ್ತಿ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಸದ್ಯ ಹಲ್ಲೆಗೊಳಗಾದ ವೈದ್ಯರಿಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ – 32 ಮಂದಿಗೆ ಗಾಯ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k