ಬೆಂಗಳೂರು: ಬೆಂಗಳೂರು ಅಂಡರ್‌ವರ್ಲ್ಡ್ ಡಾನ್‍ಗಳಿಗೆ ಅಕ್ರಮವಾಗಿ ಗನ್ ಪೂರೈಸುತ್ತಿದ್ದ ಆರು ಮಂದಿ ಆರೋಪಿಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.
ಹಾವೇರಿ ಮೂಲದ ಅಸ್ಲಂ ಗುತ್ತಲ್ ಬ್ಯಾಸ್ಕೆಟ್‍ಬಾಲ್‍ನಲ್ಲಿ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತಂಡದ ಪರ ಆಡಿದ್ದನು. ಪಶ್ಚಿಮ ಬಂಗಾಳ, ಬಿಹಾರದ ಮೂಲಕ ಅಕ್ರಮವಾಗಿ ಗನ್ ತರಿಸುತ್ತಿದ್ದ ಅಸ್ಲಂ ತನ್ನದೇ ಜಾಲ ಕಟ್ಟಿಕೊಂಡು, ಹತ್ತಿಪ್ಪತ್ತು ಸಾವಿರಕ್ಕೆಲ್ಲಾ ರೌಡಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈತ ರೌಡಿಯಾಗಿದ್ದ ಬ್ರಿಗೇಡ್ ಅಜಂನ ಶಿಷ್ಯ ಎನ್ನಲಾಗಿದೆ.
Advertisement
Advertisement
ಈ ಹಿಂದೆ ಕೂಡ ಅಸ್ಲಾಂ ಮೇಲೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ನಾಲ್ಕು ಶಸ್ತ್ರಾಸ್ತ್ರ ಕಾಯ್ದೆ ಜೊತೆ 8 ಪ್ರಕರಣಗಳು ಮೇಲಿವೆ. ಈತನ ಜೊತೆ ಇದೇ ಕೃತ್ಯದಲ್ಲಿ ಪಾಲ್ಗೊಂಡಿದ್ದ ಜಾವಿದ್ ಖಾನ್, ಧರ್ಮಣ್ಣ, ದೇವಲಪ್ಪ ಚೌಹಾಣ್, ರಾಯಣ್ಣಗೌಡ, ಸೈಯದ್ ರಿಜ್ವಾನ್, ರೋಹನ್ ಮಂಡಲ್ ಸೇರಿ ಆರು ಮಂದಿಯನ್ನು ಬಂಧಿಸಿ, ಮೂರು ಪಿಸ್ತೂಲ್ ಮತ್ತು ಒಂದು ರಿವಾಲ್ವರ್ ಸಮೇತ ಎಂಟು ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
Advertisement
ಅಜಂ ಕಾಂಗ್ರಸ್ ನಾಯಕರ ಜೊತೆ ಫೋಟೋಗಳನ್ನು ಸಹ ತೆಗೆಸಿಕೊಂಡಿದ್ದಾನೆ. ಕಾಂಗ್ರೆಸ್ ಶಾಲು ಹಾಕಿ ಪೋಸ್ ಕೂಡ ಕೊಟ್ಟಿದ್ದು, ಈತ ಕಾಂಗ್ರೆಸ್ ಕಾರ್ಯಕರ್ತ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ.