ಬುಲಂದರ್: ಮೃತ ಪತ್ನಿಯ ನೆನಪಿಗಾಗಿ ಮಿನಿ ತಾಜ್ ಮಹಲ್ ನಿರ್ಮಿಸುತ್ತಿದ್ದ ಉತ್ತರಪ್ರದೇಶದ ಫೈಜುಲ್ ಹಸನ್ ಖಾದ್ರಿ (83) ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಈ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, 83 ವರ್ಷದ ಹಸನ್ ಖಾದ್ರಿ ತಮ್ಮ ಮನೆಯ ಎದುರು ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
Advertisement
Advertisement
ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಖಾದ್ರಿ ಕುಟುಂಬಸ್ಥರು, ಗುರುವಾರ ರಾತ್ರಿ 10.30ರ ವೇಳೆ ಮನೆಯ ಮುಂದಿನ ರಸ್ತೆಯಲ್ಲಿ ಓಡಾಡುತ್ತಿದ್ದ ಅವರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆ ದಾಖಲು ಮಾಡಲಾಯಿತು. ಆದರೆ ಶುಕ್ರವಾರ ಬೆಳಗ್ಗೆ 11 ಗಂಟೆ ವೇಳೆಗೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಅವರು ಸೈಕಲ್‍ನಿಂದ ಬಿದ್ದು ಗಾಯಗೊಂಡಿದ್ದರು. ಆ ಬಳಿಕ ಅವರು ನಡೆದುಕೊಂಡೆ ಹೋಗುತ್ತಿದ್ದರು ಎಂದು ತಿಳಿಸಿದ್ದಾರೆ.
Advertisement
ಅಂದಹಾಗೇ ನಿವೃತ್ತ ಪೋಸ್ಟ್‍ಮನ್ ಆಗಿದ್ದ ಖಾದ್ರಿ ಅವರು 2011 ರಲ್ಲಿ ಮಿನಿ ತಾಜ್ ಮಹಲ್ ನಿರ್ಮಿಸಲು ಆರಂಭಿಸಿದ್ದರು. ಆದರೆ ಆರ್ಥಿಕ ಕಾರಣಗಳಿಂದ ಅವರ ಕಾರ್ಯಕ್ಕೆ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಅದರೂ ತಮ್ಮ ಛಲ ಬಿಡದೆ ನಿರ್ಮಾಣ ಕಾರ್ಯವನ್ನು ಮುಂದುವರೆಸಿದ್ದರು. ಖಾದ್ರಿ ಅವರ ಸುದ್ದಿ ತಿಳಿದಿದ್ದ ಅಂದಿನ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಸರ್ಕಾರದ ವತಿಯಿಂದ ಹಣ ಸಹಾಯ ಮಾಡಲು ಮುಂದಾಗಿದ್ದರು. ಆದರೆ ಇದನ್ನು ನಿರಾಕರಿಸಿದ ಖಾದ್ರಿ ತಮ್ಮ ಹಳ್ಳಿಯಲ್ಲಿ ಹೆಣ್ಣು ಮಕ್ಕಳ ಶಾಲೆ ನಿರ್ಮಾಣ ಮಾಡಲು ಈ ಹಣವನ್ನು ಉಪಯೋಗ ಮಾಡುವಂತೆ ತಿಳಿಸಿದ್ದರು.
Advertisement
ಅಲ್ಲದೇ ತಮ್ಮ ಭೂಮಿಯನ್ನು ಶಾಲೆ ನಿರ್ಮಾಣಕ್ಕೆ ದಾನ ಮಾಡಿ ಎಂದು ಹೇಳುವ ಮೂಲಕ ಮಾದರಿಯಾಗಿದ್ದರು. ಹಲವರು ಮಂದಿ ಖಾದ್ರಿ ಅವರ ಕಾರ್ಯ ಮೆಚ್ಚಿ ಹಣದ ಸಹಾಯ ನೀಡಲು ಮುಂದಾದರು ಅದನ್ನು ತಿರಸ್ಕರಿಸಿ ತಮ್ಮ ಹಣದಲ್ಲೇ ಸೌಧ ನಿರ್ಮಾಣ ಮಾಡಲು ದೃಢ ಸಂಕಲ್ಪ ಮಾಡಿದ್ದರು. 2014ರಂದು ಕಟ್ಟಡಕ್ಕೆ ರೂಪಕೊಟ್ಟಿದ್ದರು. ಖಾದ್ರಿ ಅವರು ತಾಜಾಮುಲ್ಲಿ ಬೇಗಂ ಜೊತೆಗೆ 1953ರಲ್ಲಿ ವಿವಾಹವಾಗಿದ್ದರು. ಆದರೆ 2011 ರಲ್ಲಿ ಬೇಗಂ ಗಂಟಲು ಕ್ಯಾನ್ಸರ್ ಗೆ ತುತ್ತಾಗಿ ಅಗಲಿದ್ದರು.
ಸದ್ಯ ಖಾದ್ರಿಯ ಅವರ ಕನಸ್ಸನನ್ನು ಅವರ ಸೋದರ ಅಳಿಯ ಪೂರ್ಣಗೊಳಿಸುವುದಾಗಿ ತಿಳಿಸಿದ್ದು, ಸೌಧ ಆಸಲಿ ತಾಜ್ ಮಹಲ್‍ಯಂತಯೇ ಕಾಣಲು ಬೇಕಾದ ಕಲ್ಲಿನ ಅಗತ್ಯವಿದೆ. ಖಾದ್ರಿ ಅವರ ಕೋರಿಕೆಯಂತೆ ಅವರ ಪತ್ನಿಯ ಪಕ್ಕದಲ್ಲೇ ಸಮಾಧಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬುಲಂದರ್ ಪೊಲೀಸ್ ಅಧಿಕಾರಿ ಯೋಗೇಂದ್ರ ಸಿಂಗ್, ಖಾದ್ರಿ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸದೆ ನೀಡಲು ಕುಟುಂಬಸ್ಥರು ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews