ಯಾವುದೇ ಖರ್ಚಿಲ್ಲದೇ ಮುಂಬಯಿಂದ ಅಬುಧಾಬಿಗೆ ಹೋದ

Public TV
1 Min Read
indigo

ಮುಂಬೈ: ವಿಮಾನಗಳಿಗೆ ಲಗೇಜ್ ತುಂಬುವ ಲೋಡರ್ ಒಬ್ಬ ಏನೂ ಖರ್ಚಿಲ್ಲದೇ ಮುಂಬಯಿಂದ ಅಬುಧಾಬಿಗೆ ಹೋಗಿ ಬಂದಿರುವ ಪ್ರಸಂಗವೊಂದು ನಡೆದಿದೆ.

ಮುಂಬಯಿಂದ ಅಬುಧಾಬಿಗೆ ಹೊರಟಿದ್ದ ಇಂಡಿಗೋ ಲೋಡರ್ ವಿಮಾನಕ್ಕೆ ಲಗೇಜ್ ತುಂಬಿಸಲೆಂದು ವಿಮಾನದ ಕಂಪಾರ್ಟ್ಮೆಂಟ್‌ಗೆ ಹೋಗಿ ಅಲ್ಲೇ ಮಲಗಿಬಿಟ್ಟಿದ್ದಾನೆ. ಇದನ್ನರಿಯದ ಪೈಲಟ್ ಆ ಕಂಪಾರ್ಟ್ಮೆಂಟ್‌ನ ಬಾಗಿಲು ಮುಚ್ಚಿ, ಅಬುಧಾಬಿಗೆ ವಿಮಾನ ಹಾರಿಸಿದ್ದಾನೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ತಪ್ಪಿಸಿಕೊಂಡ ಸಿಂಹಗಳು!

indigo

ವಿಮಾನ ಲ್ಯಾಂಡ್ ಆದ ಬಳಿಕ ಈ ವಿಚಾರ ಬೆಳಕಿಗೆ ಬಂದಿದ್ದು, ಲೋಡರ್ ಯಾವುದೇ ತೊಂದರೆ ಇಲ್ಲದೇ ಆರೋಗ್ಯಕರವಾಗಿದ್ದ. ನಂತರ ಅದೇ ವಿಮಾನದಲ್ಲಿ ಆತನನ್ನು ಮಾಮೂಲಿ ಪ್ರಯಾಣಿಕನಾಗಿ ವಾಪಸ್ ಮುಂಬಯಿಗೆ ಕಳುಹಿಸಿಕೊಡಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ)ದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಯುವತಿಯ ಒಂದು ದೂರಿಗೆ 1 ಸಾವಿರ ಪೊಲೀಸರು ತನಿಖೆ ಮಾಡಿದ್ರು!

Share This Article
Leave a Comment

Leave a Reply

Your email address will not be published. Required fields are marked *