ಟ್ರಂಪ್ ಮುಖವಾಡ ಧರಿಸಿ ಆಭರಣ ಕಳವುಗೈದ ಕಿಲಾಡಿ!

Public TV
1 Min Read
Trump mask

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಯುವಕನೊಬ್ಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಖವಾಡ ಧರಿಸಿ ಕಳ್ಳತನ ಮಾಡಿದ್ದಾನೆ. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಘಟನೆ ಭಾನುವಾರ ಬೆಳಗ್ಗೆ ಆಸ್ಟ್ರೇಲಿಯಾದ ಕ್ವೀನ್ಸ್‍ಲ್ಯಾಂಡ್‍ನಲ್ಲಿ ನಡೆದಿದೆ. ಇಲ್ಲಿನ ಆಭರಣಗಳ ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಯುವಕ ಈ ವಿನೂತನ ದಾರಿಯನ್ನು ಬಳಸಿಕೊಂಡಿದ್ದಾನೆ. ಇದೀಗ ಕಳ್ಳನ ಸೆರೆಗೆ ಸಹಾಯ ಮಾಡಿ ಎಂದು ಕ್ವೀನ್ಸ್ ಲ್ಯಾಂಡ್ ಪೊಲೀಸರು ಟ್ವೀಟ್ ಮಾಡುವ ಮೂಲಕ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

man wearing donaldtrump masks

ಇತ್ತಿಚಿನ ದಿನಗಳಲ್ಲಿ ಕಳ್ಳರು ಸಿಸಿ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ವಿಭಿನ್ನ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಹಾಗೆಯೇ ಆಭರಣಗಳ ಅಂಗಡಿಯಲ್ಲಿ ಕಳ್ಳತನ ಮಾಡಲು ಬಂದ ಯುವಕ, ಟ್ರಂಪ್ ಅವರ ಮುಖವಾಡ ಧರಿಸಿ ಅಂಗಡಿಯ ಗಾಜನ್ನು ಒಡೆದು ಆಭರಣಗಳನ್ನು ಕಳ್ಳತನ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಳ್ಳತನ ಮಾಡಲು ಬಂದ ಯುವಕ ಟ್ರಂಪ್ ಅವರ ಮುಖವಾಡದ ಜೊತೆಗೆ ಕಪ್ಪು ಬಣ್ಣದ ಕೋಟ್, ಕಪ್ಪು ಟ್ರ್ಯಾಕ್ ಪ್ಯಾಂಟ್, ಬಿಳಿ ಬಣ್ಣದ ಬೂಟ್ ಧರಿಸಿದ್ದಾನೆ. ಒಂದು ಆಭರಣದ ಅಂಗಡಿ ಮತ್ತು ಎಲೆಕ್ಟ್ರಾನಿಕ್ ಅಂಗಡಿಯ ಗಾಜನ್ನು ಒಡೆದು ಕಳವು ಮಾಡಿದ್ದಾನೆ. ದರೋಡೆಕೋರನನ್ನು ಕಂಡಲ್ಲಿ ನಮಗೆ ತಿಳಿಸಬೇಕು ಎಂದು ಕ್ವೀನ್ಸ್‍ಲ್ಯಾಂಡ್ ಪೊಲೀಸರು ಸಾರ್ವಜನಿಕರಲ್ಲಿ ರಿಕ್ವೆಸ್ಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *