ತುಮಕೂರು: ಫೇಸ್‍ಬುಕ್ ಪರಿಚಯವಾದ ಯುವಕ-ಯುವತಿ ಪ್ರೀತಿಸಿ ಮದುವೆ ಮಾಡಿಕೊಂಡು ಇದೀಗ ಯುವಕ ಯುವತಿಯನ್ನು ಗರ್ಭಿಣಿ ಮಾಡಿ ಕೈಕೊಟ್ಟ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬುಳಸಂದ್ರದಲ್ಲಿ ನಡೆದಿದೆ.
ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಲಿಂಗಪ್ಪ ಚನ್ನಪಟ್ಟಣ ಮೂಲದ ಯುವತಿಗೆ ಮೋಸ ಮಾಡಿದ ಯುವಕ. ಫೇಸ್‍ಬುಕ್ ನಲ್ಲಿ ಪ್ರೀತಿಸಿ, ಮದುವೆಯಾಗಿ ವಂಚನೆ ಮಾಡಿದ್ದಲ್ಲದೇ ಗರ್ಭಿಣಿಯಾದ ಬಳಿಕ ಆಕೆಯನ್ನು ಮಧುಗಿರಿಗೆ ಕರೆತಂದು ಗರ್ಭಪಾತಕ್ಕೆ ಯತ್ನಿಸಿದ್ದಾನೆ. ಅದಕ್ಕೆ ಒಪ್ಪದಿದ್ದಾಗ ಸಿದ್ದಲಿಂಗಪ್ಪ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ.
ಒಂದು ತಿಂಗಳ ಹಿಂದೆ ಸಿದ್ದಲಿಂಗಪ್ಪ ಮಧುಗಿರಿಯಲ್ಲಿ ಬಿಟ್ಟು ಹೋಗಿದ್ದನು. ನಾಪತ್ತೆಯಾದ ಗಂಡನಿಗಾಗಿ ಆತನ ಮನೆ ಮುಂದೆ ಕುಳಿತು ಗರ್ಭಿಣಿ ಧರಣಿ ನಡೆಸುತ್ತಿದ್ದಾರೆ. ಆದರೆ ಸಿದ್ದಲಿಂಗಪ್ಪ ಕುಟುಂಬಸ್ಥರೇ ಆತನನ್ನು ಬಚ್ಚಿಟ್ಟಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಈ ಘಟನೆ ಬಡವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv