ಚೀನಾ: ಮಲಬದ್ಧತೆಯಿಂದ ರೋಸಿ ಹೋಗಿದ್ದ ವ್ಯಕ್ತಿಯೊಬ್ಬ ಮನೆ ಮದ್ದಿನ ಮೂಲಕ ಗುಣಪಡಿಸಕೊಳ್ಳಬಹುದೆಂದು ತಿಳಿದು, 30 ಸೆಂ.ಮೀ ಉದ್ದದ ಬದನೆಕಾಯಿಯನ್ನು ಬಳಸಿ ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾದ ಘಟನೆ ಚೀನಾದಲ್ಲಿ ನಡೆದಿದೆ.
50 ವರ್ಷದ ವ್ಯಕ್ತಿಯೊಬ್ಬ ಮಲಬದ್ಧತೆಯ ಕಾಯಿಲೆಯಿಂದ ಬೇಸತ್ತಿದ್ದನು. ಹೀಗಾಗಿ ಮನೆ ಮದ್ದು ಇದಕ್ಕೆ ಪರಿಹಾರವೆಂದು ಭಾವಿಸಿ ಬದನೆಕಾಯಿಯನ್ನು ಬಳಸಿದ್ದಾನೆ. ಆದರೆ ಇದು ಅವನ ಕಾಯಿಲೆ ಗುಣಪಡಿಸುವುದಕ್ಕಿಂತ ಅವನ ಜೀವಕ್ಕೆ ಆಪತ್ತು ತಂದಿದೆ.
Advertisement
Advertisement
ಬದನೆಕಾಯಿ ಬಳಸಿದ ಎರಡು ದಿನದ ನಂತರ ಆತನಲ್ಲಿ ಮಲಬದ್ಧತೆ ಮತ್ತು ಕಿಬ್ಬೊಟ್ಟೆಯಲ್ಲಿ ಹೆಚ್ಚಿನ ನೋವುಕಾಣಿಸಿಕೊಂಡಿದೆ. ವಿಪರೀತ ವಾಕರಿಕೆ ಮತ್ತು ವಾಂತಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆಸ್ಪತ್ರೆಯಲ್ಲಿ ಎಕ್ಸ್‍ರೇ ಮಾಡಿದ ವೇಳೆ ಸುಮಾರು 30 ಸೆಂ.ಮೀ ಬದನೆಕಾಯಿಯು ದೇಹದ ಒಳಗೆ ಸಿಕ್ಕಿಕೊಂಡಿರುವುದು ಕಂಡುಬಂದಿದೆ. ಇದು ಅವನ ಶ್ವಾಸಕೋಶಕ್ಕೆ ಹಾನಿಯುಂಟುಮಾಡಿದೆ. ಕೂಡಲೇ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಬದನೆಕಾಯಿಯನ್ನು ದೇಹದಿಂದ ಹೊರತೆಗೆದಿದ್ದಾರೆ. ಸದ್ಯ ವ್ಯಕ್ತಿಯು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
Advertisement
ನಮ್ಮಲ್ಲಿ ಅನೇಕರು ಕಾಯಿಲೆಗಳನ್ನು ಗುಣಪಡಿಸಲು ಮನೆಮದ್ದುಗಳನ್ನು ಉಪಯೋಗಿಸುವುದು ಅನಾಧಿ ಕಾಲದಿಂದಲೂ ರೂಢಿಯಲ್ಲಿದೆ. ಈ ರೀತಿ ಮನೆಮದ್ದುಗಳನ್ನು ಉಪಯೋಗಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ.