ಹುಬ್ಬಳ್ಳಿ/ಧಾರವಾಡ: ಕಳೆದ ವರ್ಷ ತಲ್ವಾರ್ ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ರೌಡಿಶೀಟರ್ ಈ ವರ್ಷ ಮತ್ತೆ ಸುದ್ದಿಯಾಗಿದ್ದಾನೆ.
ಚೇತನ್ ಹಿರೆಕೇರೂರು ಕಳೆದ ವರ್ಷ ಹುಟ್ಟುಹಬ್ಬದಂದು ತಲ್ವಾರ್ ನಿಂದ ಕೇಕ್ ಕತ್ತರಿಸಿದ್ದನು. ಈಗ ತನ್ನ ಹುಟ್ಟು ಹಬ್ಬದ ಅಂಗವಾಗಿ ಕೈಯಲ್ಲಿ ಕೊಡಲಿ ಹಿಡಿದು ‘ಕೆಜಿಎಫ್’ ಚಿತ್ರದ ರಾಕಿಭಾಯ್ ಡೈಲಾಗ್ ಹೊಡೆದು ಸುದ್ದಿಯಾಗಿದ್ದಾನೆ.
Advertisement
Advertisement
ಚೇತನ್ “ಹತ್ತು ಜನರನ್ನು ಹೊಡೆದರೆ ಡಾನ್ ಅಲ್ಲ, ನಾನು ಹೊಡೆದಿದ್ದು ಹತ್ತು ಜನ ಡಾನ್ ಗಳನ್ನೇ” ಎಂಬ ಡೈಲಾಗ್ ಹೊಡೆದಿದ್ದಾನೆ. ಅಷ್ಟೇ ಅಲ್ಲದೆ ಚೇತನ್ ಕೈಯಲ್ಲಿ ಮಾರಕಾಸ್ತ್ರ ಪ್ರದರ್ಶನ ಮಾಡಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಯುವಕರ ಗುಂಪಿನ ಮೇಲೆ ಹತ್ತಿ ಹಾಡಿರುವ ದೃಶ್ಯಗಳು ವೈರಲ್ ಆಗಿದೆ. ಈಗಾಗಲೇ ಚೇತನ್ ಮೇಲೆ ಹಲವಾರು ಕೇಸ್ಗಳಿದ್ದು, ರೌಡಿಶೀಟರ್ ಕೂಡ ಆಗಿದ್ದಾನೆ. ಹಾಗಾಗಿ ಈತನ ವರ್ತನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
Advertisement
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]