ಬೆಂಗಳೂರು: ಚಪ್ಪಲಿಯಲ್ಲಿ (Slipper) ಅಕ್ರಮವಾಗಿ ಬರೋಬ್ಬರಿ 1.2 ಕೆ.ಜಿ ತೂಕದ ಚಿನ್ನವನ್ನು (Gold) ತಂದಿದ್ದ ವ್ಯಕ್ತಿಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Bengaluru Airport) ಬಂಧಿಸಲಾಗಿದೆ.
ಚಪ್ಪಲಿಯಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದನ್ನು ಕಂಡು ಕಸ್ಟಮ್ಸ್ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಇಂಹ ಉಪಾಯಗಳನ್ನು ಬಳಸಿ ಮತ್ತೆ ಕಳ್ಳಸಾಗಣೆ (Gold Smuggling) ನಡೆಯದಂತೆ ಅಧಿಕಾರಿಗಳು ಇದೀಗ ವಿಮಾನದಲ್ಲಿ ಪ್ರಯಾಣಿಸುವವರ ಚಪ್ಪಲಿಗಳನ್ನು ಅತ್ಯಂತ ಜಾಗರೂಕರಾಗಿ ಪರಿಶೀಲಿಸುತ್ತಿದ್ದಾರೆ.
Advertisement
Advertisement
ವರದಿಗಳ ಪ್ರಕಾರ ಮಾರ್ಚ್ 12 ರಂದು ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನನ್ನು ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು ತಡೆದಿದ್ದರು. ಆತನ ಬಳಿ ಪ್ರಯಾಣದ ಉದ್ದೇಶವನ್ನು ಕೇಳಿದಾಗ ಆತ ವೈದ್ಯಕೀಯ ಉದ್ದೇಶಕ್ಕೆ ಪ್ರಯಾಣಿಸುತ್ತಿರುವುದಾಗಿ ತಿಳಿಸಿದ್ದ. ಇದನ್ನೂ ಓದಿ: ಯುವಕನ ಹೊಟ್ಟೆಯಿಂದ 56 ಬ್ಲೇಡ್‍ಗಳನ್ನು ಹೊರತೆಗೆದ ವೈದ್ಯರು!
Advertisement
Advertisement
ಈ ವ್ಯಕ್ತಿ ಯಾವುದೇ ವೈದ್ಯಕೀಯ ದಾಖಲೆಗಳನ್ನು ನೀಡಲು ವಿಫಲನಾಗಿದ್ದಾನೆ. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಆತನನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತನ ಚಪ್ಪಲಿಯಲ್ಲಿ ಗುಳಿಗಳನ್ನು ರಚಿಸಿ, ಚಿನ್ನದ ಗಟ್ಟಿಗಳನ್ನು ಹುದುಗಿಸಿಟ್ಟಿರುವುದು ಕಂಡುಬಂದಿದೆ. ಅಧಿಕಾರಿಗಳು ಒಂದು ಜೊತೆ ಚಪ್ಪಲಿಯಲ್ಲಿ ಒಟ್ಟು 4 ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
#WATCH | Gold weighing 1.2 kg worth Rs 69.40 lakh seized from a slipper of a passenger who arrived from Bangkok in Bengaluru by IndiGo flight: Customs pic.twitter.com/4dBwb5Dhpv
— ANI (@ANI) March 15, 2023
ಅಧಿಕಾರಿಗಳು ವ್ಯಕ್ತಿಯ ಬಳಿಯಿಂದ ಒಟ್ಟು 69.40 ಲಕ್ಷ ರೂ. ಮೌಲ್ಯದ 24 ಕ್ಯಾರೆಟ್ ಶುದ್ಧತೆಯ ಸುಮಾರು 1.2 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಾಸಕ ಅಭಯ್ ಪಾಟೀಲ್‍ರಿಂದ ಶಾಲಾ ಮಕ್ಕಳಿಗೆ ಐಸ್‍ಕ್ರೀಂ ವಿತರಣೆ