ಬ್ಯೂನಸ್ ಐರಿಸ್: ಅರ್ಜೆಂಟೀನಾದ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್ ಅವರನ್ನು ಗುಂಡಿಕ್ಕಿ ಕೊಲ್ಲಲು ವ್ಯಕ್ತಿಯೊಬ್ಬ ಯತ್ನಿಸಿದ ಅಚ್ಚರಿ ಘಟನೆ ನಡೆದಿದೆ.
ಘಟನೆ ವೀಡಿಯೋ ವೈರಲ್ ಆಗಿದೆ. ಕ್ರಿಸ್ಟಿನಾ ಅವರು ಕಾರಿನಿಂದ ಇಳಿದಾಗ ಅವರನ್ನು ಮಾತನಾಡಿಸಲು ಅನೇಕರು ಮುಂದಾಗುತ್ತಾರೆ. ಈ ವೇಳೆ ಸುತ್ತಲೂ ಅಪಾರ ಸಂಖ್ಯೆಯಲ್ಲಿ ಜನ ನೆರೆದಿರುತ್ತಾರೆ. ಜನಸಂದಣಿ ನಡುವೆ ಇದ್ದ ವ್ಯಕ್ತಿಯೊಬ್ಬ ಕ್ರಿಸ್ಟಿನಾ ಅವರ ಹತ್ತಿರಕ್ಕೆ ಬಂದು, ಅವರ ತಲೆಗೆ ಗನ್ ಗುರಿಯಿಟ್ಟು ಟ್ರಿಗರ್ ಒತ್ತುತ್ತಾನೆ. ಈ ವೇಳೆ ಗುಂಡು ಹಾರಿಲ್ಲ. ತಕ್ಷಣ ಎಚ್ಚೆತ್ತ ರಕ್ಷಣಾ ಸಿಬ್ಬಂದಿ, ಆ ವ್ಯಕ್ತಿಯನ್ನು ವಶಕ್ಕೆ ಪಡೆಯುತ್ತಾರೆ. ಅದೃಷ್ಟವಶಾತ್ ಕ್ರಿಸ್ಟಿನಾ ಅವರು ಅಪಾಯದಿಂದ ಪಾರಾಗಿದ್ದಾರೆ. ದಾಳಿಕೋರನು ಬ್ರೆಜಿಲ್ ಮೂಲದ 35 ವರ್ಷದ ವ್ಯಕ್ತಿ ಎಂದು ಅಧಿಕಾರಿಗಳು ತಿಳಿಸಿದ್ದು, ತಕ್ಷಣ ಆತನನ್ನು ಬಂಧಿಸಿ ಗನ್ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕಾಫಿ ದೈತ್ಯ ಸ್ಟಾರ್‌ಬಕ್ಸ್‌ಗೆ ಭಾರತ ಮೂಲದ ಲಕ್ಷ್ಮಣ್ CEO ಆಗಿ ನೇಮಕ
Advertisement
https://twitter.com/AZmilitary1/status/1565513406181941248?ref_src=twsrc%5Etfw%7Ctwcamp%5Etweetembed%7Ctwterm%5E1565513406181941248%7Ctwgr%5E97dfe4b8c9870fdbbf5a3c9fe4a43713e39e33ce%7Ctwcon%5Es1_&ref_url=https%3A%2F%2Fwww.ndtv.com%2Fworld-news%2Fvideo-man-tried-to-shoot-argentinas-vice-president-gun-didnt-go-off-3309034
Advertisement
ಘಟನೆ ಬಗ್ಗೆ ಅರ್ಜೆಂಟೀನಾ ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್ ಆತಂಕ ವ್ಯಕ್ತಪಡಿಸಿದ್ದಾರೆ. ಬಂದೂಕಿನಲ್ಲಿ ಐದು ಗುಂಡುಗಳು ತುಂಬಿದ್ದವು ಎಂದು ಹೇಳಿರುವ ಅವರು, ಅರ್ಜೆಂಟೀನಾ ಪ್ರಜಾಪ್ರಭುತ್ವಕ್ಕೆ ಮರಳಿದ ನಂತರ ನಾವು ಎದುರಿಸಿದ ಗಂಭೀರ ಘಟನೆ ಇದಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
Advertisement
ಉಪಾಧ್ಯಕ್ಷ ಕ್ರಿಸ್ಟಿನಾ ಅವರು ಭ್ರಷ್ಟಾಚಾರದ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದಾರೆ. ದಾಳಿ ನಡೆದಾಗ ನೂರಾರು ಬೆಂಬಲಿಗರು ಆಕೆಯ ಬ್ಯೂನಸ್ ಐರಿಸ್ ಮನೆಯ ಹೊರಗೆ ಜಮಾಯಿಸಿದ್ದರು. ಇದನ್ನೂ ಓದಿ: ರಷ್ಯಾದ ತೈಲ ಸಂಸ್ಥೆ ಅಧ್ಯಕ್ಷ ಆಸ್ಪತ್ರೆಯ ಕಿಟಕಿಯಿಂದ ಬಿದ್ದು ಸಾವು
Advertisement
2007 ಮತ್ತು 2015ರ ನಡುವೆ ಎರಡು ಅವಧಿಗೆ ಅಧ್ಯಕ್ಷರಾಗಿ ಫೆರ್ನಾಂಡೀಸ್ ಡಿ ಕಿರ್ಚ್ನರ್ ಅರ್ಜೆಂಟೀನಾ ಸೇವೆ ಸಲ್ಲಿಸಿದ್ದರು. ಅರ್ಜೆಂಟೀನಾದಲ್ಲಿ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆ ಪರಿಣಾಮವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.