ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತರ ಜೊತೆ ಸೇರಿ ಪತ್ನಿಯನ್ನೇ ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರಿನ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡ್ರಗ್ ಸೇವಿಸಿರುವ ಪತಿ ಹಾಗೂ ಸ್ನೇಹಿತರು ಆತನ ಕಣ್ಮುಂದೆಯೇ ಎಳೆದಾಡಿ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಅಲ್ಲದೇ ಅತ್ಯಾಚಾರಕ್ಕೂ ಯತ್ನಿಸಿದ್ದಾರೆ ಎಂದು ಆಂಧ್ರದ ಕಾಕಿನಾಡ ಮೂಲದ ಮಹಿಳೆಯು ತನ್ನ ಪತಿ ವಿರುದ್ಧ 2022ರ ಅಕ್ಟೋಬರ್ 13 ರಂದು ಸುಬ್ರಮಣ್ಯಪುರ ಠಾಣೆಯಲ್ಲಿ (Subramanyapura Police Station) ಪ್ರಕರಣ ದಾಖಲಿಸಿದ್ದಾರೆ.
Advertisement
Advertisement
ಮಹಿಳೆಯ ಆರೋಪವೇನು..?: ಮಹಿಳೆಯು ಕಾಕಿನಾಡ ಮೂಲದ ಅಖಿಲೇಷ್ ಧರ್ಮರಾಜ್ ಎಂಬಾತನನ್ನು ಪ್ರೀತಿಸಿ 2019ರಲ್ಲಿ ಮದುವೆಯಾಗಿದ್ದರು. ಬಳಿಕ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನಲ್ಲಿ ದಂಪತಿ ವಾಸವಿದ್ದರು. ಆದರೆ ಪತಿ ಅಖಿಲೇಶ್ ಮನೆಗೆ ಗಾಂಜಾ ತಂದು ಸೇವನೆ ಮಾಡುತ್ತಿದ್ದನು. ಈ ವೇಳೆ ಮತ್ತಿನಲ್ಲಿ ನಿತ್ಯ ಕಿರುಕುಳ ನೀಡುತ್ತಿದ್ದ. ಇದನ್ನೂ ಓದಿ: ರಾತ್ರಿ ಪಾರ್ಕ್ನಲ್ಲಿ ಗೆಳೆಯನ ಜೊತೆ ಕುಳಿತಿದ್ದ ಹುಡುಗಿ ಮೇಲೆ ಗ್ಯಾಂಗ್ರೇಪ್!
Advertisement
ಕೊನೆಗೆ ಸ್ನೇಹಿತರ ಮನೆಗೆ ಕರೆತಂದು ಗಾಂಜಾ ಪಾರ್ಟಿ ಮಾಡ್ತಿದ್ದ. ಈ ವೇಳೆ ಆತನ ಸ್ನೇಹಿತರ ಜೊತೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಗ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದು, ವಾಪಸ್ ಮನೆಗೆ ಬರುವಂತೆ ಕಿರುಕುಳ ನೀಡಿದ್ದಾರೆ. ಅಲ್ಲದೆ ಈ ವಿಷಯ ಹೊರಗೆ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
Advertisement
ಸದ್ಯ ಕೇಸ್ ವಾಪಸ್ ಪಡೆಯಲು ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆ ಠಾಣೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ. ನೊಂದು ಬಂದ ಮಹಿಳೆ ದೂರು ಕೊಟ್ಟರೂ ಆರೋಪಿಗಳನ್ನು ಪೊಲೀಸರು ಬಂಧಿಸಿರಲಿಲ್ಲ. ಸದ್ಯ ಆರೋಪಿಯ ಬಂಧಿಸಿ ಪೊಲೀಸರು ಕರೆ ತಂದಿದ್ದಾರೆ.
Web Stories