ಚೆನ್ನೈ: ಚಲಿಸುತ್ತಿದ್ದ ರೈಲು ಹತ್ತುವ ಸಾಹಸಕ್ಕೆ ಮುಂದಾಗಿದ್ದ ಪ್ರಯಾಣಿಕನೊಬ್ಬ ಕಾಲು ಜಾರಿ ಬಿದ್ದಿದ್ದು, ಅಪಾಯದ ಅಂಚಿನಲ್ಲಿದ್ದ ವ್ಯಕ್ತಿಯನ್ನು ರೈಲ್ವೇ ಪೊಲೀಸರು ರಕ್ಷಿಸಿದ ಘಟನೆ ಚೆನ್ನೈನ ಎಗ್ಮೋರ್ ನಿಲ್ದಾಣದಲ್ಲಿ ನಡೆದಿದೆ.
ಪ್ರಯಾಣಿಕ ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದಿದ್ದು, ಈ ವೇಳೆ ಸ್ಥಳದಲ್ಲೇ ಇದ್ದ ರೈಲ್ವೇ ಪೊಲೀಸರು ರಕ್ಷಣೆ ಮಾಡಿರುವ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೈಲ್ವೇ ಸುರಕ್ಷತೆಯ ಬಗ್ಗೆ ಸಾಕಷ್ಟು ಬಾರಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ ಬಳಿಕವೂ ಇಂತಹ ಘಟನೆಗಳು ಪುನಾರವರ್ತನೆ ಆಗುತ್ತಿದ್ದು, ವಿಡಿಯೋ ವೀಕ್ಷಿಸಿದ ಹಲವರು ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
#WATCH: Railway Protection Force (RPF) personnel saved a passenger's life by rescuing him from falling, while he was boarding a train at Egmore Railway Station's platform. The passenger didn't suffer any injury. #TamilNadu (12.11.18) pic.twitter.com/OdNDYMdu2y
— ANI (@ANI) November 14, 2018
Advertisement
ಕಳೆದ ಫೆಬ್ರವರಿಯಲ್ಲಿಯೂ ಮುಂಬೈ ನಿಲ್ದಾಣದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಏಳು ವರ್ಷದ ಬಾಲಕ ಚಲಿಸುತ್ತಿದ್ದ ರೈಲು ಹಾಗೂ ಪ್ಲಾಟ್ ಫಾರ್ಮ್ ನಡುವೇ ಸಿಲುಕಿಕೊಂಡಿದ್ದ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಕ್ಷಣಮಾತ್ರದಲ್ಲಿ ಬಾಲಕನ್ನು ಹಿಡಿದು ಹೊರಗೆಳೆದಿದ್ದರು. ಈ ವೇಳೆಯೂ ಪೊಲೀಸರ ಕಾರ್ಯ ಬಾಲಕನ ಪ್ರಾಣವನ್ನು ಉಳಿಸಿತ್ತು.
Advertisement
https://twitter.com/Nikitaa7002/status/1062575548076044288
Advertisement
https://twitter.com/Major_kuldeep/status/1062572591129354240
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews