ಲಕ್ನೋ: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ತನ್ನ ಪತ್ನಿಯನ್ನು ಮಕ್ಕಳೆದುರೇ 8 ಮಹಡಿಯಿಂದ ನೂಕಿ ಹಾಕಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ನೀತು (32) ಮೃತ ದುರ್ದೈವಿ. ಸಂಜೀವ್(36) ಆರೋಪಿ. 2011ರಲ್ಲಿ ನೀತು ಹಾಗೂ ಸಂಜೀವ್ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬೇರೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧದ ಇಟ್ಟುಕೊಂಡ ವಿಚಾರವಾಗಿ ಪ್ರತಿ ದಿನ ಜಗಳವಾಗುತ್ತಿತ್ತು. ಇದನ್ನೂ ಓದಿ: ಕಲುಷಿತ ಆಹಾರ ಸೇವನೆ 60 ವಿದ್ಯಾರ್ಥಿಗಳು ಅಸ್ವಸ್ಥ – ಪ್ರಾಣಾಪಾಯದಿಂದ ಪಾರು
ಸಂತ್ರಸ್ತೆಯ ಅಣ್ಣ ರಾಜ್ ಕಿರಣ್ ಈ ಸಂಬಂಧ ದೂರು ನೀಡಿದ್ದಾರೆ. ದೂರಿನಲ್ಲಿ ಸಂಜೀವ್ ಅವರಿಗೆ ಕಳೆದ ಮೂರು ವರ್ಷಗಳಿಂದ ಇನ್ನೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ತನ್ನ ತಂಗಿ ಎಂದು ಹೇಳಿ ಬಾವ ಆಕೆಯನ್ನು ಮನೆಗೆ ಕರೆದುಕೊಂಡು ಬರುತ್ತಿದ್ದರು. ಈ ವಿಚಾರವಾಗಿ ಅವರಿಬ್ಬರ ನಡುವೆ ದಿನಾಲೂ ಜಗಳ ನಡೆಯುತ್ತಿತ್ತು. ಬಳಿಕ ಕೋಪಗೊಂಡ ಸಂಜೀವ್ ತನ್ನ ಮಕ್ಕಳ ಮುಂದೆಯೇ ತಂಗಿಯನ್ನು ಎಂಟನೇ ಮಹಡಿಯಿಂದ ನೂಕಿ ಹಾಕಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಸಂತ್ರಸ್ತೆಯ ಅಣ್ಣ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಕೊಲೆ ಹಾಗೂ ಮಹಿಳೆ ಕ್ರೌರ್ಯ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ಗೋಸೈಗಂಜ್ ಶೈಲೇಂದ್ರ ಗಿರ್ ಹೇಳಿದ್ದಾರೆ. ಇದನ್ನೂ ಓದಿ: ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದ ‘ಕಾಕ್ಟೈಲ್’ ಚಿತ್ರತಂಡ