ಚಿಕ್ಕಮಗಳೂರು: ದಂಡ ಹಾಕಿದ್ದಕ್ಕೆ (Fine) ವ್ಯಕ್ತಿಯೊಬ್ಬ ಜಡ್ಜ್ (Judge) ಮೇಲೆ ಚಪ್ಪಲಿ (Slippers) ತೂರಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲಾ ನ್ಯಾಯಾಲಯದ 1ನೇ ಹೆಚ್ಚುವರಿ ಕಿರಿಯ ಶ್ರೇಣಿಯ ವಿಭಾಗದಲ್ಲಿ ನಡೆದಿದೆ. ನ್ಯಾಯಧೀಶರ ಮೇಲೆ ಚಪ್ಪಲಿ ತೂರಿದ ಅರವಿಂದ ನಗರ ನಿವಾಸಿ ಲೋಕೇಶ್‌ನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಕಳೆದ 1 ತಿಂಗಳ ಹಿಂದೆ ಕುಡಿದು ವಾಹನ ಚಲಾಯಿಸುತ್ತಿದ್ದ ವೇಳೆ ಲೋಕೇಶ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಬಳಿಕ ಪೊಲೀಸರು ಆತನಿಗೆ ಕೋರ್ಟ್‌ನಲ್ಲಿ ದಂಡ ಕಟ್ಟುವಂತೆ ಸೂಚಿಸಿದ್ದರು. ಇದಕ್ಕೆ ಆರೋಪಿ ಲೋಕೇಶ್ ದಂಡ ಕೂಡ ಕಟ್ಟಿದ್ದ. ದಂಡ ಕಟ್ಟಿದ ತಿಂಗಳ ಬಳಿಕ ಲೋಕೇಶ್ ಇಂದು ಕೋರ್ಟ್‌ಗೆ ಕುಡಿದು ಬಂದು, ಜಡ್ಜ್ ಮೇಲೆ ಚಪ್ಪಲಿ ತೂರಿದ್ದಾನೆ. ಇದನ್ನೂ ಓದಿ: ರಟ್ಟೀಹಳ್ಳಿ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು RSS ಪಥಸಂಚಲನ
Advertisement
Advertisement
ಕೂಡಲೇ ಅಲ್ಲೇ ಇದ್ದ ನಗರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೋರ್ಟ್‌ನಲ್ಲಿ ಆತ, ನಾನು ಏನು ತಪ್ಪು ಮಾಡಿದ್ದೇನೆ ಅಂತ ದಂಡ ಹಾಕಿದ್ದೀರಾ ಎಂದು ಕೂಗಾಡಿದ್ದಾನೆ. ಲೋಕೇಶ್‌ನ ಈ ವರ್ತನೆ ನೋಡಿದ ಕೂಡಲೇ ಕೋರ್ಟ್‌ನಲ್ಲಿದ್ದ ವಕೀಲರು ಕೂಡಾ ಆತನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನಿವೃತ್ತ ಪ್ರೊಫೆಸರ್‌ಗೆ ಯುವತಿ ಕಾಲ್ – ಅಶ್ಲೀಲ ವೀಡಿಯೋ ಮಾಡಿ 21 ಲಕ್ಷ ನಾಮ ಹಾಕಿದ್ಲು