ಲಕ್ನೋ: ಉತ್ತರಪ್ರದೇಶದ ಫತೇಪುರ್ ವ್ಯಕ್ತಿಯೊಬ್ಬರಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ಕಾನ್ಪುರದ ರೀಜೆನ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ 10 ದಿನಗಳಿಂದಲೂ ಈತ ತಲೆನೋವು, ಕೆಮ್ಮು, ನೆಗಡಿ, ಜ್ವರ ಹಾಗೂ ಬೆನ್ನು ನೋವಿನಿಂದ ಬಳಲುತ್ತಿದ್ದನು. ತಪಾಸಣೆಗೆ ಒಳಪಡಿಸಿದಾಗ ಆಫ್ರಿಕನ್ ಹಂದಿಜ್ವರ ಇರುವುದು ಪತ್ತೆಯಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ (CMO) ಅಲೋಕ್ ರಂಜನ್ ತಿಳಿಸಿದ್ದಾರೆ. ಇದನ್ನೂ ಓದಿ: ಅಸ್ಸಾಂನಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ – ಹಂದಿ ಮಾಂಸ ಸೇವಿಸದಂತೆ ಸರ್ಕಾರ ಸೂಚನೆ
Advertisement
Advertisement
ಸದ್ಯ ಸೋಂಕು ವರದಿಯಾದ ವ್ಯಕ್ತಿ ಮತ್ತು ಆತನ ಕುಟುಂಬವನ್ನು ಪ್ರತ್ಯೇಕಿಸಲಾಗಿದ್ದು, ಹೊರಗೆ ತಿರುಗಾಡದಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಈ ಏರಿಯಾದಲ್ಲಿ ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಸಿಕ್ತಿಲ್ಲ
Advertisement
Advertisement
ಅಸ್ಸಾಂನಲ್ಲಿ ಹಂದಿಗಳಲ್ಲಿ ಪತ್ತೆಯಾಗಿತ್ತು: ಅಸ್ಸಾಂನ ದಿಬ್ರುಗಢ್‌ನ ಭೋಗಾಲಿ ಪಥ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿ ಅಸ್ಸಾಂ ಸರ್ಕಾರ ಹಂದಿ ಮಾಂಸ ಸೇವಿಸದಂತೆ ಸೂಚಿಸಿತ್ತು. ಅಲ್ಲದೆ ಆಫ್ರಿಕನ್ ಹಂದಿಜ್ವರ ಪತ್ತೆಯಾದ ಆ ಪ್ರದೇಶದ 1 ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲಲಾಗಿತ್ತು. ಜೊತೆಗೆ ವ್ಯಾಪ್ತಿ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಘೋಷಿಸಿ ಕೊಂದ ಹಂದಿಗಳನ್ನು ಹೂಳಲಾಗಿತ್ತು ಎಂದು ದಿಬ್ರುಗಢ್ ಪಶುಸಂಗೋಪನೆ ಮತ್ತು ಪಶುವೈದ್ಯಾಧಿಕಾರಿ ಡಾ.ಹಿಮಂದು ಬಿಕಾಶ್ ಬರುವಾ ತಿಳಿಸಿದ್ದರು.