ಮುಂಬೈ: ವ್ಯಕ್ತಿಯೋರ್ವ ತನ್ನ ಗರ್ಲ್‍ಫ್ರೆಂಡ್ ಜೊತೆಗೆ ಪ್ರವಾಸಕ್ಕೆ ಹೋಗಿದ್ದನ್ನು ಪತ್ನಿಯಿಂದ ಮುಚ್ಚಿಡಲು ಹೋಗಿ ಜೈಲು ಕಂಬಿ ಎಣಿಸುವಂತಾಗಿದೆ.
Advertisement
ಹೌದು, 32 ವರ್ಷದ ವ್ಯಕ್ತಿಯೋರ್ವ ತನ್ನ ಗರ್ಲ್‍ಫ್ರೆಂಡ್ ಜೊತೆಗೆ ಮಾಲ್ಡೀವ್ಸ್ ಪ್ರವಾಸ ಹೋಗಿದ್ದನು. ಈ ವಿಚಾರವನ್ನು ಪತ್ನಿಯಿಂದ ಮರೆಮಾಚಲು ಪಾಸ್‍ಪೋರ್ಟ್‍ನಲ್ಲಿದ್ದ ವೀಸಾ ಸ್ಟಾಂಪ್‍ನ ಪುಟಗಳನ್ನು ಹರಿದು ಹಾಕಿದ್ದಾನೆ. ಮಾಲ್ಡೀವ್ಸ್‌ನಿಂದ ಹಿಂದಿರುಗಿದ ನಂತರ ಪಾಸ್‍ಪೋರ್ಟ್ ತಪಾಸಣೆ ವೇಳೆ ಆತನ ಪಾಸ್‍ಪೋರ್ಟ್‍ನ ಕೆಲವು ಪುಟಗಳು ಕಾಣೆಯಾಗಿರುವುದನ್ನು ವಲಸೆ ಅಧಿಕಾರಿಗಳಿಗೆ ತಿಳಿದುಬಂದಿದ್ದು, ಆತನ ವಿರುದ್ಧ ಮುಂಬೈ ಪೊಲೀಸರು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ (ಐಪಿಸಿ) ಸೆಕ್ಷನ್ ವಂಚನೆ ಮತ್ತು ಫೋರ್ಜರಿ ಪ್ರಕರಣವನ್ನು ದಾಖಲಿಸಿ ವಿಚಾರಣೆ ನಡೆಸಿದ್ದಾರೆ.
Advertisement
Advertisement
ಮುಂಬೈ ನಿವಾಸಿಯಾಗಿದ್ದ, ಇಂಜಿನಿಯರ್ ತನ್ನ ಹೆಂಡತಿಗೆ ಕೆಲಸದ ನಿಮಿತ್ತ ವಿದೇಶ ಪ್ರವಾಸಕ್ಕೆ ಹೋಗುವುದಾಗಿ ಹೇಳಿ ತನ್ನ ಗೆಳತಿಯನ್ನು ಭೇಟಿ ಮಾಡಲು ಕೆಲವು ದಿನಗಳ ಹಿಂದೆ ಮಾಲ್ಡೀವ್ಸ್‌ಗೆ ಹೋಗಿದ್ದ. ಆದರೆ ಈ ವೇಳೆ ಫೋನ್ ಕರೆಯನ್ನು ಸ್ವೀಕರಿಸದೇ ಇದ್ದಿದ್ದರಿಂದ ಪತ್ನಿಗೆ ಅನುಮಾನ ಹುಟ್ಟಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ, ಮಾಲ್ಡೀವ್ಸ್ ಟ್ರಿಪ್ ಹೋಗಿದ್ದನ್ನು ಪತ್ನಿಯಿಂದ ಮರೆಮಾಚಲು, ತನ್ನ ಪಾಸ್‍ಪೋರ್ಟ್‍ನ ಕೆಲವು ಪುಟಗಳನ್ನು ಹರಿದು ಗುರುವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣ ತಲುಪಿದ್ದಾನೆ. ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯಾ ಪ್ರಕರಣ- ಕಾರಾಗೃಹದಲ್ಲಿ ಆರೋಪಿಗೆ ಕೈದಿಗಳಿಂದ ಹಲ್ಲೆ
Advertisement
ನಂತರ ವಿಮಾನ ನಿಲ್ದಾಣದಲ್ಲಿ ಪಾಸ್‍ಪೋರ್ಟ್ ತಪಾಸಣೆ ವೇಳೆ ವಲಸೆ ಅಧಿಕಾರಿಗಳು ಆತನ ಪಾಸ್‍ಪೋರ್ಟ್‍ನಲ್ಲಿದ್ದ ಕೆಲವು ಪುಟಗಳು ಕಾಣೆಯಾಗಿರುವುದನ್ನು ಗಮನಿಸಿ ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. ಈ ವೇಳೆ ಸತ್ಯ ಹೇಳಲು ವ್ಯಕ್ತಿ ತಡಬಡಾಯಿಸಿದ್ದರಿಂದ ಅಧಿಕಾರಿಗಳು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊನೆಗೆ ಬೇರೆ ದಾರಿ ಕಾಣದೇ ವ್ಯಕ್ತಿ ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾನೆ. ಅಲ್ಲದೇ ಪಾಸ್‍ಪೋರ್ಟ್‍ನ ಪುಟಗಳನ್ನು ಹರಿದು ಹಾಕುವುದು ಅಪರಾಧ ಎಂಬುದು ತನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾನೆ. ಇದನ್ನೂ ಓದಿ: 100 ವರ್ಷ ಹಳೆಯ, 3,800 ಟನ್ ತೂಕದ ಕಟ್ಟಡ ಸ್ಥಳಾಂತರ – ಹೇಗೆ ನೋಡಿ
ವಾಸ್ತವವಾಗಿ, ಪಾಸ್‍ಪೋರ್ಟ್ ಅನ್ನು ಭಾರತ ಸರ್ಕಾರ ನೀಡುತ್ತದೆ ಮತ್ತು ಇದನ್ನು ಸರ್ಕಾರಿ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಯಾವುದೇ ಹಾನಿಯನ್ನುಂಟುಮಾಡುವುದು ಕ್ರಿಮಿನಲ್ ಆಕ್ಟ್‌ಗೆ ಸಮಾನವಾಗಿರುತ್ತದೆ.