ಬೆಂಗಳೂರು: ವ್ಯಕ್ತಿಯೊಬ್ಬ ವಿಧವೆಯರನ್ನು ಟಾರ್ಗೆಟ್ ಮಾಡಿ ಅವರ ಜೊತೆ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ವೆಂಕಟೇಶ್ ಮೋಸ ಮಾಡಿದ ವ್ಯಕ್ತಿ. ಆರೋಪಿ ವೆಂಕಟೇಶ್ ವಿಧವೆ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರ ಜೊತೆ ಸಲುಗೆಯಿಂದ ಇರುತ್ತಿದ್ದನು. ಕಣ್ಣಿಗೆ ಕಾಣುವಂತಹ ಕಂಡವರ ಫ್ಲಾಟ್‍ಗಳನ್ನು ತನ್ನದೇ ಎಂದು ತೋರಿಸಿ ಮಹಿಳೆಯರಿಗೆ ನಂಬಿಸುತ್ತಿದ್ದನು.
ಇಷ್ಟೇ ಅಲ್ಲದೆ ವೆಂಕಟೇಶ್ ಮೊದಲೇ ನೊಂದ ಮಹಿಳೆಯರಿಗೆ ಆಮಿಷಗಳನ್ನೊಡ್ಡಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದನು. ಬಳಿಕ ಫ್ಲಾಟ್ ನಿನ್ನ ಹೆಸರಿಗೆ ಬರೆಯುವುದಾಗಿ ಮಹಿಳೆಯಿಂದ ಬರೋಬ್ಬರಿ 80 ಲಕ್ಷ ರೂ. ಹಾಗೂ ಚಿನ್ನಾಭರಣವನ್ನು ಪಡೆದಿದ್ದಾನೆ.
ಹಣ ಹಾಗೂ ಚಿನ್ನಾಭರಣವನ್ನು ಸಿಗುತ್ತಿದ್ದಂತೆ ವೆಂಕಟೇಶ್ ಮಹಿಳೆಯ ಸಂಬಂಧ ಕಡಿತಗೊಳಿಸಿ ಪರಾರಿ ಆಗಿದ್ದಾನೆ. ಸದ್ಯ ಮೋಸ ಹೋದ ಮಹಿಳೆ ಆರೋಪಿ ವೆಂಕಟೇಶ್ ವಿರುದ್ಧ ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.