ಜೈಪುರ: ತನ್ನ ಮಗಳನ್ನು ಕೋಚಿಂಗ್ ಸೆಂಟರ್‌ಗೆ (Coaching Center) ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಶನಿವಾರ ರಾಜಸ್ಥಾನದ (Rajasthan) ಸಿಕಾರ್‌ನಲ್ಲಿ (Sikar) ನಡೆದ ಗ್ಯಾಂಗ್‌ವಾರ್‌ನಲ್ಲಿ (Gang War) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್ ಸಾವನ್ನಪ್ಪಿದ್ದು, ಇನ್ನೊಬ್ಬ ವ್ಯಕ್ತಿಗೆ ಗಾಯಗಳಾಗಿವೆ.
ವರದಿಗಳ ಪ್ರಕಾರ ನಾಲ್ವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಈ ವೇಳೆ ತಾರಾಚಂದ್ ಕಡ್ವಾಸರ್ ಅವರಿಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ. ಅವರ 16 ವರ್ಷದ ಮಗಳು ಮೃತ ತಂದೆಯನ್ನು ತಬ್ಬಿಕೊಂಡು ಗೋಗರೆಯುತ್ತಿರುವ ಭಾವನಾತ್ಮಕ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಸಿಕಾರ್ ನಗರದ ಪಿಪ್ರಾಲಿ ರಸ್ತೆಯಲ್ಲಿ ಗ್ಯಾಂಗ್‌ಸ್ಟರ್ ರಾಜು ಥೇತ್‌ನನ್ನು ಗುರಿಯಾಗಿಸಿಕೊಂಡು 4 ಜನರು ಗುಂಡು ಹಾರಿಸಿದ್ದಾರೆ. ಈ ವೇಳೆ ಥೇತ್ ಹಾಗೂ ತಾರಾಚಂದ್‌ಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ. ಘಟನೆಯ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಅವರನ್ನು ಬಂಧಿಸಲು ಪೊಲೀಸರು ರಾಜ್ಯಾದ್ಯಂತ ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ದತ್ತಜಯಂತಿಗೆ ಕಾಫಿನಾಡಲ್ಲಿ ಪೊಲೀಸ್ ಸರ್ಪಗಾವಲು – ಡಿ.5 ರಿಂದ 9ರವರೆಗೆ ಪ್ರವಾಸಿಗರಿಗೆ ನಿಷೇಧ
ಘಟನೆ ನಡೆದಿರುವ ಸ್ಥಳದಲ್ಲಿ ಹಲವಾರು ಹಾಸ್ಟೆಲ್ ಹಾಗೂ ಕೋಚಿಂಗ್ ಸೆಂಟರ್‌ಗಳಿದ್ದು, ಮೃತ ಗ್ಯಾಂಗ್‌ಸ್ಟರ್ ಥೇತ್‌ನ ಸಹೋದರ ಕೂಡಾ ಆ ಪ್ರದೇಶದಲ್ಲಿ ಹಾಸ್ಟೆಲ್ ನಡೆಸುತ್ತಿದ್ದರು. ಮೃತ ಥೇತ್ ಬೆಂಬಲಿಗರು ಸಿಕಾರ್‌ನಲ್ಲಿ ಬಂದ್‌ಗೆ ಕರೆ ನೀಡಿದ್ದಾರೆ. ಹಂತಕರನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: 3 ದಿನವಾದ್ರೂ ಸಿಗದ ಚಾಲಾಕಿ ಚಿರತೆ – 4ನೇ ದಿನಕ್ಕೆ ಕಾರ್ಯಾಚರಣೆ