ಬೆಂಗಳೂರು: ಘನ ರಾಜ್ಯ ಸರ್ಕಾರದ ತಾರತಮ್ಯ ನೀತಿಗಳಿಂದಾಗಿ ಜನರು ಕೂಡ ರೋಸಿ ಹೋಗಿದ್ದಾರೆ. ಮಾಸ್ಕ್ ಸರಿಯಾಗಿ ಹಾಕಿಲ್ಲ, ದಂಡ ಕಟ್ಟಿ ಎಂದ ಮಾರ್ಷಲ್‍ಗಳಿಗೆ ಮಲ್ಲೇಶ್ವರಂನಲ್ಲಿ ವ್ಯಕ್ತಿಯೊಬ್ಬರು ಫುಲ್ ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ನಿಮಗೆ ತಾಕತ್ ಇದ್ರೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿ ಎಂದು ಗರಂ ಆಗಿದ್ದಾರೆ. ಕಾನೂನು ಎಲ್ರಿಗೂ ಒಂದೇ. ಆದರೆ ನಮ್ಮಂತಹ ಅಮಾಯಕರ ಮೇಲೆ ಮಾತ್ರ ನಿಮ್ಮ ದೌರ್ಜನ್ಯ ಎಂದು ಕಿಡಿಕಾರಿದ್ದಾರೆ.
Advertisement
Advertisement
ಅತ್ತ ಯಾದಗಿರಿಯಲ್ಲಿ ಬೈಕ್ ಸವಾರನೊಬ್ಬ, ನನ್ನತ್ರ ದುಡ್ಡಿಲ್ಲ, ಅದಕ್ಕೆ ಮಾಸ್ಕ್ ಹಾಕಿಲ್ಲ. ನೀವೇ ಹಣ ಕೊಡಿ, ಮಾಸ್ಕ್ ತಗೋತೀನಿ ಎಂದು ಪೌರಾಯುಕ್ತರ ಬಳಿ ಡ್ರಾಮಾ ಮಾಡಿದ್ದಾನೆ. ಮಹಿಳೆಯೊಬ್ಬರು ನಾವು ಫೈನ್ ಕಟ್ತೀವಿ, ನೀವೇ ಮಾಸ್ಕ್ ಕೊಡ್ಬೇಕು ಎಂದು ಗಲಾಟೆ ಮಾಡಿದ್ದಾರೆ.. ಮತ್ತೊಬ್ರು ಲಸಿಕೆ ಹಾಕಿಸಿಕೊಂಡ್ರೂ ಮಾಸ್ಕ್ ಯಾಕೆ ಹಾಕ್ಬೇಕು ಎಂದು ಕೇಳಿದ್ದಾರೆ. ಇದನ್ನೂ ಓದಿ: ಮಗಳ ಫೋಟೋ ಹಂಚಿಕೊಂಡು ಅಭಿಮಾನಿಗಳಿ ಶಾಕ್ ಕೊಟ್ಟ ಸತೀಶ್ ನಿನಾಸಂ
Advertisement
ಈ ಮಧ್ಯೆ ಇದೊಂದು ವಾರ ಮಾತ್ರ ವೀಕೆಂಡ್ ಕರ್ಫ್ಯೂ ಪಾಲನೆ ಮಾಡ್ತೀವಿ. ಮುಂದಿನ ವಾರದಿಂದ ಮಾಡಲ್ಲ ಎಂದು ಹೋಟೆಲ್ ಮತ್ತು ಬಾರ್ ಮಾಲೀಕರ ಸಂಘ ಎಚ್ಚರಿಸಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್, ನಿಮ್ಮ ಸಮಸ್ಯೆ ನಮಗೆ ಗೊತ್ತಿದೆ. ಆದರೆ ಜನಾರೋಗ್ಯಕ್ಕಾಗಿ ಈ ನಿರ್ಧಾರ ಮಾಡಿದ್ದೇವೆ. ಸಹಕರಿಸಿ ಎಂದು ಕೋರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಬೇಜವಾಬ್ದಾರಿ ನಡೆಯನ್ನು ಜನ ಮರೆಯಲ್ಲ, ಕ್ಷಮಿಸುವುದೂ ಇಲ್ಲ: ಸಚಿವ ಸುಧಾಕರ್