ಮಂಗಳೂರು: ಕ್ಯಾನ್ಸರ್ ಕಾಯಿಲೆ ಬಂತೆಂದ್ರೆ ಇನ್ನು ಸಾವೇ ಗತಿ ಎನ್ನುವವರೇ ಹೆಚ್ಚು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಮೂಡಬಿದ್ರೆಯ ವ್ಯಕ್ತಿಯೋರ್ವರು ಕ್ಯಾನ್ಸರನ್ನೇ (Cancer) ಗೆದ್ದು ತೋರಿಸಿದ್ದಾರೆ.
ಹೌದು… ಕ್ಯಾನ್ಸರ್ ಜೊತೆ ಸೆಣಸಾಡುತ್ತಿರುವ ಅದೇಷ್ಟೋ ಸಾವಿರ ಮಂದಿಗೆ ಇವರು ಸ್ಫೂರ್ತಿದಾಯಕವಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ (Moodbidri) ತಾಲೂಕಿನ ಪುಚ್ಚೆಮೊಗರು ಗ್ರಾಮದ ನಿವಾಸಿ ಥಾಮಸ್ ಗ್ರೇಜರಿ ರೆಬೆಲ್ಲೋ ಹುಟ್ಟಿನಿಂದಲೇ ಕೃಷಿಕರಲ್ಲ. ಗಲ್ಫ್ ರಾಷ್ಟ್ರದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದು ಅಲ್ಲೇ ಸೆಟಲ್ ಆಗುವ ಯೋಚನೆಯಲ್ಲಿದ್ದರು. ಆದರೆ ಗಂಟಲಿನ ಕ್ಯಾನ್ಸರ್ ಇವರ ಯೋಜನೆಯನ್ನೇ ಬದಲಾಯಿಸಿತು. ಕ್ಯಾನ್ಸರ್ ದೇಹದೊಳಗೆ ಆಕ್ರಮಿಸುತ್ತಾ ಹೋಯಿತು.
Advertisement
Advertisement
ಸತ್ರೆ ಜನ್ಮಭೂಮಿಯಲ್ಲೇ ಸಾಯೋಣ ಅಂತಾ ಹಳ್ಳಿಗೆ ಬಂದ ಥಾಮಸ್ ಗ್ರೇಜರಿ ರೆಬೆಲ್ಲೋ ಅವರಲ್ಲಿ ಊರಿಗೆ ಬಂದ ನಂತರ ಕಂಡಿದ್ದು ಅಚ್ಚರಿಯ ಬದಲಾವಣೆ. ಕತ್ತರಿಸಲ್ಪಟ್ಟ ಗಂಟಲು, ದೇಹದೊಳಗೆ ಕಾಡುತ್ತಿದ್ದ ಆರೋಗ್ಯದ ಸಮಸ್ಯೆಯ ನಡುವೆಯೇ ಕಾಡುತ್ತಿದ್ದ ಒಂಟಿತನವನ್ನು ದೂರಮಾಡಲು ಕೃಷಿ (Agriculture) ಕೆಲಸಕ್ಕೆ ಕೈ ಹಾಕಿದರು.
Advertisement
Advertisement
ದಿನ ಕಳೆದಂತೆ ಥಾಮಸ್ ಅವರ ಆರೋಗ್ಯದಲ್ಲಿ ಕಂಡಿದ್ದೇ ಅಚ್ಚರಿಯ ಬದಲಾವಣೆಯಾಯಿತು. ಸಾವಿನ ದಿನ ಎಣಿಸುತ್ತಿದ್ದ ಥಾಮಸ್ ತನ್ನ ಒಂದೂವರೆ ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಾ ಮಾಡುತ್ತಾ ಕ್ಯಾನ್ಸರ್ ಜೊತೆ ಹೋರಾಡುತ್ತಾ ಹನ್ನೆರಡು ವರ್ಷಗಳೇ ಕಳೆದುಹೋಗಿದೆ. ಅವರ ಪತ್ನಿ ಮತ್ತು ಮಗ ವಿದೇಶದಲ್ಲಿದ್ದು, ಥಾಮಸ್ ಮಾತ್ರ ಊರಲ್ಲೇ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ತಕ್ಕ ಪ್ರಾಶಸ್ತ್ಯ ಸಿಗುತ್ತಿಲ್ಲ: ಶರದ್ ಪವಾರ್ ಬೇಸರ
ಅಡಿಕೆ, ತೆಂಗು, ತರಕಾರಿ ಕೃಷಿ ಮಾಡುತ್ತಾ ಮಾಡುತ್ತಾ ತನ್ನೊಳಗಿರುವ ಮಹಾಮಾರಿಯನ್ನೇ ಮರೆತು ಸ್ಫೂರ್ತಿಯಾಗಿದ್ದಾರೆ. ಪ್ರಾರಂಭದಲ್ಲಿ ಕ್ಯಾನ್ಸರ್ ಜೊತೆಗೆ ಸಕ್ಕರೆ ಖಾಯಿಲೆ ಕೂಡಾ ಕಾಡಿದ್ದರೂ ಈಗ ಅದೂ ಸಂಪೂರ್ಣ ಮಾಯವಾಗಿದೆ. ಈ ಬಗ್ಗೆ ಥಾಮಸ್ ಗ್ರೇಜರಿ ರೆಬೆಲ್ಲೊ ಮಾತನಾಡಿ, ಕ್ಯಾನ್ಸರ್ ರೋಗಿಗಳು ಧೃತಿಗೆಡದೆ ಕೃಷಿ ಮಾಡಿ. ಕೃಷಿಯಲ್ಲಿ ಖುಷಿ ಪಡಿ ಎನ್ನುವ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಕ್ಯಾನ್ಸರ್ ರೋಗಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿ ಹೋರಾಡುವವರಿಗಿಂತ ಥಾಮಸ್ ಭಿನ್ನವಾಗಿ ಕಾಣುತ್ತಾರೆ. ಇದನ್ನೂ ಓದಿ: ಕೊಡಗಿನಲ್ಲಿ 3ನೇ ಸಾಕಾನೆ ಶಿಬಿರ ಲೋಕಾರ್ಪಣೆ – ಹಾರಂಗಿ ವಿಶೇಷತೆ ಏನು?