ಅಯೋಧ್ಯೆ (ಉತ್ತರಪ್ರದೇಶ): ಬಾಲರಾಮನ ಪ್ರಾಣಪ್ರತಿಷ್ಠೆ (Pran Pratishtha) ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಮಭಕ್ತನಿಗೆ ಹೃದಯಾಘಾತ ಸಂಭವಿಸಿದ ಘಟನೆ ನಡೆದಿದೆ.
ಹೌದು, ಪ್ರಾಣಪ್ರತಿಷ್ಠೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತ (Heart Attack) ಸಂಭವಿಸಿದೆ. ರಾಮಕೃಷ್ಣ ಶ್ರೀವಾಸ್ತವ (65) ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ. ಈ ವೇಳೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಭಾರತೀಯ ವಾಯುಪಡೆ ಕೆಲವೇ ನಿಮಿಷದಲ್ಲಿ ಮೊಬೈಲ್ ಆಸ್ಪತ್ರೆಗೆ (Mobile Hospital) ಸ್ಥಳಾಂತರಿಸಿ ಪ್ರಾಣ ರಕ್ಷಣೆ ಮಾಡಿದೆ.
Advertisement
Advertisement
ರಾಮಭಕ್ತನಿಗೆ ಹೃದಯಾಘಾತ ಸಂಭವಿಸಿದ ಕೂಡಲೇ ಸಮಯೋಜಿತ ಕಾರ್ಯಾಚರಣೆ ನಡೆಸಿದ ವಿಂಗ್ ಕಮಾಂಡರ್ ಮನೀಶ್ ಗುಪ್ತಾ ನೇತೃತ್ವದ ಭೀಷ್ಮ್ ಕ್ಯೂಬ್ ತಂಡ ಕೆಲವೇ ನಿಮಿಷದಲ್ಲಿ ಸಂಚಾರಿ ಆಸ್ಪತ್ರೆಗೆ ಸ್ಥಳಾಂತರಿಸಿತು. ಬಳಿಕ ಗೋಲ್ಡನ್ ಅವರ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ವ್ಯಕ್ತಿಯನ್ನ ರಕ್ಷಿಸಿತು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಇನ್ಮುಂದೆ ಕರ್ಫ್ಯೂ ಇರೋದಿಲ್ಲ, ಗುಂಡಿನ ಸದ್ದು ಕೇಳೋದಿಲ್ಲ: ಯೋಗಿ ಆದಿತ್ಯನಾಥ್
Advertisement
Advertisement
ಮೂಲಗಳ ಪ್ರಕಾರ, ಹೃದಯಾಘಾತಕ್ಕೆ ಒಳಗಾಗುವ ಸಂದರ್ಭದಲ್ಲಿ ವ್ಯಕ್ತಿಯ ರಕ್ತದೊತ್ತಡವು 210/170 ಮಟ್ಟಕ್ಕೆ ಹೆಚ್ಚಿತ್ತು. ಆದ್ದರಿಂದ ಭೀಷ್ಮ್ ತಂಡವು ಮೊದಲು ಹೃದಯಾಘಾತಕ್ಕೆ ಒಳಗಾದವರಿಗೆ ಪ್ರಥಮ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿತ್ತು. ಬಳಿಕ ಆರೋಗ್ಯ ಸಹಜ ಸ್ಥಿತಿಗೆ ಮರಳಿದ ನಂತರ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದನ್ನೂ ಓದಿ: ದೇಶ ಗುಲಾಮಗಿರಿಯಿಂದ ಮುಕ್ತವಾಗಿದೆ, ಸಾವಿರಾರು ವರ್ಷಗಳ ನಂತರವೂ ಈ ಕ್ಷಣ ನೆನಪಿಸಿಕೊಳ್ತಾರೆ: ಮೋದಿ
ಆರೋಗ್ಯ ಮೈತ್ರಿ ಹಾಗೂ ವಿಪತ್ತು ನಿರ್ವಹಣಾ ಯೋಜನೆಯಡಿಯಲ್ಲಿ ಕ್ಯೂಬ್-ಭೀಷ್ಮ್ ಮೊಬೈಲ್ ಆಸ್ಪತ್ರೆಗಳನ್ನ ಅಯೋಧ್ಯೆಯಲ್ಲಿ ತೆರೆಯಲಾಗಿತ್ತು. ಮುಖ್ಯವಾಗಿ ಪ್ರಾಣಪ್ರತಿಷ್ಠೆ ಸಮಾರಂಭದ ಹಿನ್ನೆಲೆ ಹೆಚ್ಚಿನ ಗಣ್ಯರು ಆಗಮಿಸುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ವ್ಯವಸ್ಥೆ ಮಾಡಲಾಗಿತ್ತು.