ಯುಎಇ: ಪಬ್ಜಿ ಆಡಬೇಡ ಎಂದು ಹೇಳಿದ್ದಕ್ಕೆ ಪತ್ನಿಯೊಬ್ಬಳು ತನ್ನ ಪತಿಗೆ ವಿಚ್ಛೇದನ ನೀಡಲು ಅರ್ಜಿ ಸಲ್ಲಿಸಿದ ಘಟನೆ ಯುಎಇಯಲ್ಲಿ ನಡೆದಿದೆ.
ಪತಿ ತನ್ನ ಪತ್ನಿಗೆ ಪಬ್ಜಿ ಆಡಬೇಡ ಎಂದು ಹೇಳಿದ್ದನು. ಇದರಿಂದ ಬೇಸರಗೊಂಡ ಪತ್ನಿ ತನ್ನ ಪತಿಯಿಂದ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದಾಳೆ. ಇದರಿಂದ ಪತಿ ಕಂಗಾಲಾಗಿದ್ದಾನೆ.
ಮನೋರಂಜನೆಯನ್ನು ಆಯ್ಕೆ ಮಾಡುವುದಕ್ಕೆ ಎಲ್ಲರಿಗೂ ಅಧಿಕಾರ ಇದೆ. ಆದರೆ ನಾನು ಈ ಅವಕಾಶದಿಂದ ವಂಚಿತಳಾಗಿದ್ದೇನೆ. ಅಲ್ಲದೆ ನಾನು ಕೇವಲ ನನ್ನ ಸ್ನೇಹಿತರು ಹಾಗೂ ಸಂಬಂಧಿಕರ ಜೊತೆ ಪಬ್ಜಿ ಆಡುತ್ತೇನೆ ಎಂದು ತಿಳಿಸಿದ್ದಾಳೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪತಿ, ನಾನು ಆಕೆಯ ಸ್ವತಂತ್ರವನ್ನು ಕಿತ್ತುಕೊಳ್ಳುತ್ತಿಲ್ಲ. ನಾನು ನನ್ನ ಕುಟುಂಬವನ್ನು ಒಟ್ಟಿಗೆ ಇಡಲು ಆಕೆಗೆ ಪಬ್ಜಿ ಆಡಬೇಡ ಎಂದು ಹೇಳಿದ್ದೆ. ಪಬ್ಜಿ ಆಡಬೇಡ ಎಂದು ನಾನು ಹೇಳಿದ್ದಕ್ಕೆ ಆಕೆ ವಿಚ್ಛೇದನ ಅರ್ಜಿ ಸಲ್ಲಿಸುತ್ತಾಳೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ನವದೆಹಲಿಯಲ್ಲಿ ವರನೊಬ್ಬ ತನ್ನ ಮದುವೆಯಲ್ಲಿ ವೇದಿಕೆ ಮೇಲೆ ಕುಳಿತು ಪಬ್ಜಿ ಆಡುತ್ತಿದ್ದ ವಿಡಿಯೋ ಟಿಕ್ಟಾಕ್ನಲ್ಲಿ ಸೆರೆ ಹಿಡಿಯಲಾಗಿತ್ತು. ವರ ಪಬ್ಜಿ ಆಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.