ಬೀಜಿಂಗ್: ಮೂರು ವರ್ಷದಲ್ಲಿ ಕಿಡ್ನಾಪ್ ಆಗಿದ್ದ ಬಾಲಕ ಫೇಸ್ ಆ್ಯಪ್ ಮೂಲಕ 18 ವರ್ಷಗಳ ನಂತರ ಪೋಷಕರಿಗೆ ಸಿಕ್ಕಿದ ಘಟನೆ ಚೀನಾದಲ್ಲಿ ನಡೆದಿದೆ.
ಯು ವೈಫಾಂಗ್ (21) ಮೂರು ವರ್ಷದ ಮಗುವಿದ್ದಾಗ ಕಿಡ್ನಾಪ್ ಆಗಿದ್ದನು. ಬಳಿಕ ಆತನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಯು ವೈಫಾಂಗ್‍ನನ್ನು ಹುಡುಕಲು ಫೇಸ್ ಆ್ಯಪ್ ತಂತ್ರಜ್ಞಾನ ಬಳಸಿ ಪತ್ತೆ ಹಚ್ಚಿದ್ದಾರೆ.
ಪೊಲೀಸರು ಯು ವೈಫಾಂಗ್ ಈಗ ಹೇಗಿರುತ್ತಾನೆ ಎಂದು ಕಂಡು ಹಿಡಿಯಲು ಫೇಸ್ ಆ್ಯಪ್ ತಂತ್ರಜ್ಞಾನವನ್ನು ಬಳಸಿದ್ದರು. ಯು ವೈಫಾಂಗ್ ಮುಖಕ್ಕೆ ಸಾವಿರ ಮಂದಿಯ ಡೇಟಾಬೇಸ್ ಹೋಲಿಕೆ ಆಗಿದೆ. ದಕ್ಷಿಣ ಚೀನಾದ ಗಾವಾಂಗ್‍ಡಾಂಗ್ ಪ್ರಾಂತ್ಯದ ಕೋಲ್ಡ್-ಕೇಸ್ ತನಿಖಾಧಿಕಾರಿಗಳು ಕಾಣೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚಲು ಅಸ್ತಿತ್ವದಲ್ಲಿರುವ ಮುಖ ಗುರುತಿಸಲು ಅಲ್ ತಂತ್ರಜ್ಞಾನವನ್ನು ಬಳಸಿದ್ದಾರೆ.
ನಾವು ಆತನನ್ನು ಹುಡುಕಿದ್ದಾಗ ಆತ ತಾನು ಕಿಡ್ನಾಪ್ ಆಗಿದೆ ಎಂದು ನಂಬಲೇ ಇಲ್ಲ. ಬಳಿಕ ಆತನ ಡಿಎನ್‍ಎ ಪರೀಕ್ಷೆ ಮಾಡಿಸಲಾಯಿತು. ಡಿಎನ್‍ಎ ವರದಿ ಆತನ ಪೋಷಕರ ವರದಿಗೆ ಮ್ಯಾಚ್ ಆಗುತ್ತಿತ್ತು. ಯು ವೈಫಾಂಗ್‍ನನ್ನು ಲೀ ಎಂಬವರು ದತ್ತು ಪಡೆದುಕೊಂಡಿದ್ದರು. ಬಳಿಕ 2001ರಲ್ಲಿ ಅವರು ಕೆಲಸ ಮಾಡುತ್ತಿದ್ದ ಸೈಟ್ ಬಳಿ ಕಾಣೆಯಾಗಿದ್ದರು. ಈ ಬಗ್ಗೆ ಯು ವೈಫಾಂಗ್ ಪೋಷಕರು ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು.
ಯು ವೈಫಾಂಗ್ ಕಾಣೆಯಾಗಿದ್ದಾಗ ಅವರ ಪೋಷಕರು ಯು ಕ್ಸಿಂಗ್ವಾನ್ ಹಾಗೂ ರೊಂಗ್ ಮುಹುವಾನ್ ಅಕ್ಕಪಕ್ಕದ ಊರಿನಲ್ಲಿ ಆತನನ್ನು ಹುಡುಕಿದ್ದರು. ಆದರೆ ಯು ವೈಫಾಂಗ್ ಸಿಕ್ಕಿರಲಿಲ್ಲ. ಈಗ ಬರೋಬ್ಬರಿ 18 ವರ್ಷದ ನಂತರ ಆತ ತನ್ನ ಪೋಷಕರ ಬಳಿ ಸೇರಿದ್ದಾನೆ.