ಬೆಂಗಳೂರು: ದಂಡ ವಿಧಿಸಿದ್ದಕ್ಕೆ ವ್ಯಕ್ತಿಯೊಬ್ಬ ಪೊಲೀಸರ ವಸ್ತುಗಳನ್ನೇ ಕದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಶೋಕ್ ಗಜರೆ ಪೊಲೀಸರು ವಸ್ತು ಕದ್ದ ಕಳ್ಳ. ಅಶೋಕ್ ಗಜರೆ ನೋ ಪಾರ್ಕಿಂಗ್ ಜಾಗದಲ್ಲಿ ತನ್ನ ವಾಹನವನ್ನು ಪಾರ್ಕ್ ಮಾಡಿದ್ದನು. ಇದನ್ನು ನೋಡಿದ ಪೇದೆ ಮುಲ್ಲ ಮುಸ್ತಫಾ ಆತನಿಗೆ ದಂಡ ವಿಧಿಸಿದ್ದರು.
Advertisement
Advertisement
ದಂಡ ವಿಧಿಸಿದ್ದರಿಂದ ಕೋಪಗೊಂಡ ಅಶೋಕ್ ವೈಜಿ ಪಾಳ್ಯ ಪೊಲೀಸ್ ಕ್ವಾಟರ್ಸ್‍ವರೆಗೂ ಪೇದೆ ಮುಸ್ತಫಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಬಳಿಕ ಬೈಕಿನಲ್ಲಿದ್ದ ಪೊಲೀಸ್ ರೈನ್ ಕೋಟ್, ಟ್ಯಾಬ್, ಮಾಸ್ಕ್ ಗಳನ್ನು ಕದಿದ್ದಾನೆ.
Advertisement
ಅಶೋಕ್ ಬೈಕಿನಲ್ಲಿದ್ದ ವಸ್ತುಗಳನ್ನು ಕದಿಯುತ್ತಿದ್ದಾಗ ಶಬ್ದ ಕೇಳಿಸಿದೆ. ಹೊರಗಡೆ ಶಬ್ದ ಬಂದಿದ್ದರಿಂದ ಮುಸ್ತಫಾ ಅವರು ಹೊರಬಂದಿದ್ದಾರೆ. ಈ ವೇಳೆ ಅಶೋಕ್ ನನೆಗೆ ಫೈನ್ ಹಾಕ್ತಿಯಾ? ನಾನ್ಯಾರು ಎಂದು ನಿನಗೆ ತೋರಿಸುತ್ತೇನೆ ಎಂದು ಅವಾಜ್ ಹಾಕಿ ಪರಾರಿಯಾಗಿದ್ದಾನೆ.
Advertisement
ಮುಸ್ತಫಾ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದು, ಈ ಬಗ್ಗೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.