ಅಬುಧಾಬಿ: ಪತ್ನಿ ಮಲಗುತ್ತಿದ್ದ ವೇಳೆ ಪತಿ ಆಕೆಯ ಮೊಬೈಲ್ ತೆಗೆದುಕೊಂಡು ಆಕೆಯ ಸ್ನೇಹಿತರೊಂದಿಗೆ ಅಶ್ಲೀಲವಾಗಿ ಚಾಟ್ ಮಾಡಿ ಅವರ ಪ್ರೈವೇಟ್ ಫೋಟೋಗಳನ್ನು ಕದಿಯುತ್ತಿದ್ದ ಪ್ರಕರಣವೊಂದು ಯುಎಇನ ಫುಜೈರಾದಲ್ಲಿ ನಡೆದಿದೆ.
ತನ್ನ ಪತ್ನಿ ಮಲಗಿದ ನಂತರ ಆಕೆಯ ಮೊಬೈಲಿನಲ್ಲಿ ಪತಿ ಪ್ರತಿನಿತ್ಯ ಆಕೆಯ ಸ್ನೇಹಿತರ ಜೊತೆ ಅಶ್ಲೀಲವಾಗಿ ಚಾಟ್ ಮಾಡಿ ಅವರ ಫೋಟೋವನ್ನು ಕದಿಯುತ್ತಿದ್ದನು. ಈ ವೇಳೆ ಪತ್ನಿಯ ಸ್ನೇಹಿತೆಗೆ ಈ ವಿಷಯ ತಿಳಿದು ಆಕೆ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು.
Advertisement
ಆರೋಪಿಗೆ ಒಂದು ತಿಂಗಳು ಜೈಲು ಶಿಕ್ಷೆ ನೀಡಲಾಗಿದೆ. ಅಲ್ಲದೇ ಸುಮಾರು 1,000 ದೀರಮ್ (19 ಸಾವಿರ ರೂ). ದಂಡ ವಿಧಿಸಲಾಗಿದೆ. ತನ್ನ ಪತಿ ಇಂಥ ನೀಚ ಕೆಲಸ ಮಾಡುತ್ತಿರುವುದನ್ನು ನೋಡಿದ ಪತ್ನಿ ಆತನಿಗೆ ವಿಚ್ಛೇದನ ನೀಡಲು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾಳೆ.
Advertisement
Advertisement
ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನನ್ನ ಪತ್ನಿ ರಾತ್ರಿ ಮಗುತ್ತಿದ್ದ ವೇಳೆ ನಾನು ಆಕೆಯ ಮೊಬೈಲ್ನಲ್ಲಿ ಆಕೆಯ ಸ್ನೇಹಿತೆಯರ ಫೋಟೋವನ್ನು ಕದಿಯುತ್ತಿದ್ದೆ ಎಂದು ಪೊಲೀಸರ ಬಳಿ ಹೇಳಿದ್ದಾನೆ.
Advertisement
ವಿಚಾರಣೆ ಬಳಿಕ ಪೊಲೀಸರು ಆರೋಪಿಯ ಮೊಬೈಲ್ ಪರಿಶೀಲಿಸಿದ್ದಾಗ ಆತನ ಫೋನ್ನಲ್ಲಿ ಹಲವು ಅಶ್ಲೀಲ ಫೋಟೋಗಳು ಇತ್ತು. ಪತಿಯ ಈ ಕೃತ್ಯ ನೋಡಿದ ಪತ್ನಿ ಕೋರ್ಟ್ ನಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾಳೆ. ಆದರೆ ಆಕೆಯ ಕುಟುಂಬದವರು ವಿಚ್ಛೇದನ ನೀಡದಂತೆ ಆಕೆಯನ್ನು ಒತ್ತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv