ಬೆಂಗಳೂರು: ನಗರದಲ್ಲಿ ನಾಯಿ ಕಳ್ಳರಿದ್ದಾರೆ. ಕಾಸ್ಟ್ಲಿ ನಾಯಿಯೇ ಇವರ ಟಾರ್ಗೆಟ್ ಆಗಿರುತ್ತದೆ.
ನಗರದ ಕುಮಾರಸ್ವಾಮಿ ಲೇಔಟ್‍ನಲ್ಲಿ ವ್ಯಕ್ತಿಯೊಬ್ಬ ನಾಯಿ ಕಳ್ಳತನ ಮಾಡಿದ್ದು, ಈತನ ಕೈಚಳಕ ಇದೀಗ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೈಬರೀಯನ್ ಹಸ್ಕಿ ನಾಯಿಯನ್ನು ಅತ್ಯಂತ ಸುಲಭವಾಗಿ ಕಳವು ಮಾಡಿದ್ದಾನೆ.
ಕೈಗೆ ಗ್ಲೌಸ್ ಹಾಕ್ಕೊಂಡು, ನಾಯಿ ಬೆಲ್ಟ್ ಹಿಡ್ಕೊಂಡು ಸ್ಟೈಲ್ ಆಗಿ ಗೇಟ್ ಓಪನ್ ಮಾಡ್ಕೊಂಡು ಮನೆಯೊಳಗೆ ಎಂಟ್ರಿ ಕೊಡ್ತಾನೆ. ಥಟ್ ಅಂತಾ ಕಣ್ಣಾಡಿಸಿ ನಾಯಿ ಪಕ್ಕ ಹೋಗಿ ಕೈಯಲ್ಲಿದ್ದ ಬೆಲ್ಟ್ ನ್ನು ನಾಯಿ ಕತ್ತಿಗೆ ಹಾಕಿ ಎಳೆದುಕೊಂಡು ಹೋಗಿದ್ದಾನೆ. ಕಾಸ್ಟ್ಲಿ ಬ್ರೀಡ್ ನಾಯಿಗಳೇ ಈತನ ಟಾರ್ಗೆಟ್ ಆಗಿರುತ್ತದೆ.
ಸೈಬರೀಯನ್ ಹಸ್ಕಿ ನಾಯಿಯನ್ನು ಕದ್ದ ಕಳ್ಳನ ಕರಾಮತ್ತು ಬೆಳಕಿಗೆ ಬಂದಿದ್ದು, ಸದ್ಯ ಈ ಬಗ್ಗೆ ಸಿದ್ದು ಅನ್ನೋರು ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.