ರಾಯ್ಪುರ್: ಮಾತನಾಡದಿದ್ದಕ್ಕೆ ವ್ಯಕ್ತಿಯೊಬ್ಬ 20 ವರ್ಷದ ಯುವತಿಯನ್ನು (Woman) 51 ಬಾರಿ ಸ್ಕ್ರೂ ಡ್ರೈವರ್‌ನಿಂದ (Screwdriver) ಇರಿದು ಭೀಕರವಾಗಿ ಕೊಲೆ ಮಾಡಿದ ಘಟನೆ ಛತ್ತೀಸ್‍ಗಢದ (Chhattisgarh) ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.
ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ ಪಂಪ್ ಹೌಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯು ಜಶ್ಪುರ್ ಜಿಲ್ಲೆಯ ನಿವಾಸಿಯಾಗಿದ್ದು, ಈತ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಬಸ್‍ನಲ್ಲಿ ಹೋಗುತ್ತಿದ್ದ ಯುವತಿಯ ಪರಿಚಯವಾಗಿತ್ತು. ಈ ಪರಿಚಯದ ಮೂಲಕವೇ ನಂಬರ್‌ನ್ನು ಕಂಡೆಕ್ಟರ್‌ಗೆ ನಂಬರ್ ನೀಡಿದ್ದಳು.
ಆದರೆ ಆತ ಕೆಲಸಕ್ಕಾಗಿ ಗುಜರಾತ್‍ನ ಅಹಮದಾಬಾದ್‍ಗೆ ತೆರಳಿದ್ದ. ಇದಾದ ಬಳಿಕವು ಕೆಲವು ತಿಂಗಳ ಕಾಲ ಫೋನ್ (Phone) ಸಂಪರ್ಕದಲ್ಲಿದ್ದರು. ಆದರೆ ನಂತರದಲ್ಲಿ ಆ ಯುವತಿಯು ಆತನೊಂದಿಗೆ ಫೋನ್‍ನಲ್ಲಿ ಮಾತನಾಡುವುದನ್ನು ನಿಲ್ಲಿಸಿದ್ದಾಳೆ. ಅದರಿಂದ ಸಿಟ್ಟಿಗೆದ್ದ ಕಂಡೆಕ್ಟರ್ ಆಕೆಯ ಪೋಷಕರಿಗೂ ಬೆದರಿಕೆಯನ್ನು ಹಾಕಿದ್ದ. ಇದನ್ನೂ ಓದಿ: KGF ನ ಬಿಇಎಂಎಲ್ ಬಳಕೆ ಮಾಡದ 967 ಎಕರೆ ಜಾಗದಲ್ಲಿ ಕೈಗಾರಿಕೆ ಟೌನ್ ಶಿಪ್: ಮುರುಗೇಶ್ ನಿರಾಣಿ
ಆದಾದ ಬಳಿಕವೂ ಆಕೆ ಮಾತನಾಡದಿದ್ದರಿಂದ ಆಕೆ ಒಬ್ಬಳೇ ಇದ್ದಾಗ ಅವಳ ಮನೆಗೆ ಬಂದಿದ್ದಾನೆ. ಈ ವೇಳೆ ಆಕೆ ಕಿರುಚಾಡಿ ನೆರೆಹೊರೆಯವರನ್ನು ಕರೆಯಲು ಪ್ರಯತ್ನಿಸಿದ್ದಾಳೆ. ಆದರೆ ಆರೋಪಿಯು ಯುವತಿ ಕಿರುಚದಂತೆ ತಡೆಯಲು ಆಕೆಯ ಬಾಯಿಯನ್ನು ದಿಂಬಿನಿಂದ ಮುಚ್ಚಿ ಸ್ಕ್ರೂ ಡ್ರೈವರ್‌ನಲ್ಲಿ 51 ಬಾರಿ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆಯಾದ ನಂತರ ಮನೆಗೆ ಬಂದ ಯುವತಿಯ ಸಹೋದರ ರಕ್ತದ ಮಡುವಿನಲ್ಲಿ ಆಕೆಯನ್ನು ಕಂಡಿದ್ದಾನೆ. ಕೂಡಲೇ ಆತ ಪೊಲೀಸರಿಗೆ ದೂರು ದಾಖಲಿಸಿದ್ದಾನೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ವಿದೇಶಿಯರಿಗೆ ಟಫ್ ರೂಲ್ಸ್ – ಫೈಜರ್ ಲಸಿಕೆ ನೀಡಲು ನಿರ್ಧಾರ