ಪ್ರತಿನಿತ್ಯ ನಿಂದನೆ – ಪತ್ನಿಗೆ 40 ಬಾರಿ ಚಾಕುವಿನಿಂದ ಇರಿದ ಪತಿ

Public TV
1 Min Read
WIFE MURDER

ಚಂಡೀಗಢ: ವ್ಯಕ್ತಿಯೊಬ್ಬ 40ಕ್ಕೂ ಅಧಿಕ ಬಾರಿ ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

ಈ ಘಟನೆ ಅಶೋಕ್ ವಿಹಾರ್ ಪ್ರದೇಶದಲ್ಲಿ ಶನಿವಾರ ನಡೆದಿದ್ದು, ವಂಶಿಕಾ ಶರ್ಮಾ ಮೃತ ದುರ್ದೈವಿ. ಆರೋಪಿಗಳನ್ನು 28 ವರ್ಷದ ಪಂಕಜ್ ಭಾರದ್ವಾಜ್ ಮತ್ತು ಆತನ ಸ್ನೇಹಿತ ನಾಶಿಮ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಕೊಲೆ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಗುರಗ್ರಾಮ ಪೊಲೀಸ್ ಅಧಿಕಾರಿ ಸುಭಾಷ್ ಬೋಕಾನ್ ತಿಳಿಸಿದ್ದಾರೆ.

WIFE

ಶನಿವಾರ ಚಾಕುವಿನಿಂದ ಇರಿದು ಗಾಯಗೊಂಡು ಮೃತಪಟ್ಟಿದ್ದ ವಂಶಿಕಾ ಶರ್ಮಾ ಮೃತದೇಹ ಪತ್ತೆಯಾಗಿತ್ತು. ಆದರೆ ಈ ವೇಳೆ ಶರ್ಮಾಳ ಪತಿ ಪಂಕಜ್ ಕಾಣೆಯಾಗಿದ್ದನು. ಹೀಗಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರಬಹುದು ಶಂಕಿಸಲಾಗಿತ್ತು. ಬಳಿಕ ಲಕ್ಷ್ಮಣ್ ವಿಹಾರ ಪ್ರದೇಶದಲ್ಲಿ ಸಿಸಿಟಿವಿಯನ್ನು ಪರಿಶೀಲನೆ ಮಾಡಿ ಅನುಮಾನದ ಮೇರೆಗೆ ಇಬ್ಬರನ್ನು ಬಂಧಿಸಲಾಯಿತು ಎಂದು ಬೋಕನ್ ಹೇಳಿದ್ದಾರೆ.

ಭಾರದ್ವಾಜ್ ಮತ್ತು ಶರ್ಮಾ ಅವರು 2016ರ ಏಪ್ರಿಲ್ ನಲ್ಲಿ ಮದುವೆಯಾಗಿದ್ದರು. ಆದರೆ ಮೃತ ಪತ್ನಿ ಪ್ರತಿದಿನ ನನ್ನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಳು ಹಾಗೂ ನಿಂದನೆ ಮಾಡುತ್ತಿದ್ದಳು. ಅಷ್ಟೇ ಅಲ್ಲದೇ ಆಕೆಯ ಪೋಷಕರು ಕೂಡ ದಿನನಿತ್ಯ ಅವಮಾನ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ಭಾರದ್ವಾಜ್ ಆರೋಪಿಸಿದ್ದಾನೆ.

WIFE 1

ಪ್ರತಿದಿನದ ನಿಂದನೆಯ ಕಾರಣದಿಂದಾಗಿ ಹಿಂಸೆಗೆ ಒಳಗಾಗಿದ್ದರಿಂದಾಗಿ ಆತ ಸ್ನೇಹಿತನ ಸಹಾಯದಿಂದ ಕೊಲೆ ಮಾಡಿದ್ದಾನೆ. ಸದ್ಯಕ್ಕೆ ಪೊಲೀಸರು ವಿವಿಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article