ಮುಂಬೈ: ರೂಮ್‍ಮೇಟ್ ಜೊತೆ ಕೊಠಡಿಯನ್ನು ಸ್ವಚ್ಛಗೊಳಿಸುವ ಕಾರಣಕ್ಕೆ ಜಗಳವಾಡಿ ನಂತರ ಆತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮನೋಜ್ ಪುಲ್ವನಾಥ್ ಮೇದಕ್ ಆರೋಪಿ ಹಾಗೂ ದೇಬಜಿತ್ ಧಂಧಿರಾಮ್ ಚರೋಹ್(26) ಮೃತ ದುರ್ದೈವಿ. ಈ ಇಬ್ಬರು ಅಸ್ಸಾಂ ಮೂಲದವರು. ಇಬ್ಬರು ಮಹಾರಾಷ್ಟ್ರದ ಮುಂಬೈನ ಮಹಾಪೆ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜೊತೆಗೆ ಖಾಸಗಿ ಕಂಪನಿಯೊಂದರಲ್ಲಿ ಲ್ಯಾಬ್ ಬಾಯ್‍ಗಳಾಗಿ ಕೆಲಸ ಮಾಡುತ್ತಿದ್ದರು.
ದೇಬಜಿತ್ ಕುಡಿತದ ಚಟ ಹೊಂದಿದ್ದ. ಇದರಿಂದಾಗಿ ಪ್ರತಿನಿತ್ಯ ಮನೋಜ್‍ನನ್ನು ಹಿಂಸಿಸುತ್ತಿದ್ದ. ಜೊತೆಗೆ ಮನೆಗೆಲಸವನ್ನೆಲ್ಲಾ ಒಬ್ಬನೇ ಮಾಡು ಎಂದು ಒತ್ತಾಯಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಕೆಲದಿನಗಳ ಹಿಂದೆ ಮನೆ ಸ್ವಚ್ಛಗೊಳಿಸುವ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ಇದು ಅತಿರೇಕಗೊಂಡು ಮನೋಜ್ ಮೇಲೆ ದೇಬಜಿತ್ ಮರದ ಹಲಗೆಯನ್ನು ಎಸೆದನು. ಇದರಿಂದ ಕೋಪಗೊಂಡ ಮನೋಜ್ ಅಡುಗೆ ಮನೆಯ ಚಾಕುವಿನಿಂದ ದೇಬಜಿತ್‍ನ ಕುತ್ತಿಗೆಗೆ ಇರಿದಿದ್ದಾನೆ. ಇದನ್ನೂ ಓದಿ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು – ಭಾರತದಿಂದ ಅಗತ್ಯ ವಸ್ತುಗಳ ಪೂರೈಕೆ
ತೀವ್ರ ಗಾಯಗೊಂಡಿದ್ದ ದೇಬಜಿತ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಇತರ ಸ್ನೇಹಿತರು ಪುರಸಭೆಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ತುರ್ಭೆ ಎಂಐಡಿಸಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಮಳೆ- ವಿಮಾನ ಸಂಚಾರದಲ್ಲಿ ತೊಡಕು