ಹುಬ್ಬಳ್ಳಿ: ವ್ಯಕ್ತಿಯೊಬ್ಬ ಮೊಬೈಲ್ ಡೇಟಾ ಹಾಕಿಸಲು ಹಣ ನೀಡಿಲ್ಲವೆಂದು ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡ ಘಟನೆ ಧಾರವಾಡ ತಾಲೂಕಿನ ನವಲೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಬಸವರಾಜ ಅವರ ಮಗ ಮೈಲಾರಿ ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡ ಯುವಕ. ಕೇವಲ ಆರನೇಯ ತರಗತಿ ಓದಿರುವ ಮೈಲಾರಿಯ ವಯಸ್ಸು 20 ದಾಟಿದ್ದರು, ಯಾವುದೇ ಕೆಲಸ ಮಾಡದೇ ಕಾಲ ಕಳೆಯುತ್ತಿದ್ದ. ಜೊತೆಗೆ ಮೊಬೈಲ್ ಹುಚ್ಚು ಜಾಸ್ತಿ ಹಿಡಿಸಿಕೊಂಡಿದ್ದ. ನಿನ್ನೆ ಮೈಲಾರಿಯ ಮೊಬೈಲ್ ಕರೆನ್ಸಿ ಖಾಲಿಯಾಗಿತ್ತು. ಹೀಗಾಗಿ ಮೈಲಾರಿ ತನ್ನ ತಂದೆ ಬಳಿ ಹಣ ಕೇಳಿದ್ದಾನೆ. ಆದರೆ ತಂದೆ ಮೊಬೈಲ್‍ಗೆ ಕರೆನ್ಸಿ ಹಾಕಿಸಲು ಒಪ್ಪಿರಲಿಲ್ಲ. ಈ ಕಾರಣಕ್ಕಾಗಿ ಮನೆಯಲ್ಲಿ ಜಗಳವಾಗಿದೆ. ಇದರಿಂದಾಗಿ ಕೋಪಗೊಂಡ ಯುವಕ ಗೊರಪ್ಪನ ವೇಶ ಹಾಕಿಕೊಂಡು ಮನೆಯ ಹತ್ತಿರ ದೇವಸ್ಥಾನಕ್ಕೆ ತೆರಳಿದ್ದಾನೆ. ದೇವಸ್ಥಾನಕ್ಕೆ ತೆರಳಿ ಅಲ್ಲಿರುವ ತ್ರಿಶೂಲವನ್ನು ತನ್ನ ಮರ್ಮಾಂಗಕ್ಕೆ ಚುಚ್ಚಿಕೊಂಡು ಅಸ್ವಸ್ಥನಾಗಿ ಬಿದ್ದಿದ್ದಾನೆ. ಇದನ್ನೂ ಓದಿ: ಲವ್ವರ್ ಭೇಟಿ ಮಾಡಲು ಗ್ರಾಮದ ಕರೆಂಟ್ ಕಟ್ ಮಾಡುತ್ತಿದ್ದ ಲೈನ್‌ಮ್ಯಾನ್
ಇದನ್ನು ಕಂಡ ಸ್ಥಳೀಯರು ಅವರ ತಂದೆ ಬಸವರಾಜರಿಗೆ ವಿಷಯ ತಿಳಿಸಿದ್ದಾರೆ. ಸದ್ಯ ಮೈಲಾರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಪರೇಷನ್ ಮಾಡಿ ತ್ರಿಶೂಲ ಹೊರ ತೆಗೆಯಲಾಗಿದೆ. ಮೈಲಾರಿ ಮೊದಲಿಂದಲೂ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಂಡಿದ್ದ. ಆತನ ತಂದೆ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಖಾಲಿಯಾಗಿ ತಿರುಗಾಡುತ್ತಿದ್ದ ಮೈಲಾರಿ, ತನ್ನ ಬೇಸರ ಕಳೆಯಲು ಮೊಬೈಲ್ ನೆಚ್ಚಿಕೊಂಡಿದ್ದನು. ಇದನ್ನೂ ಓದಿ: ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!
ಆದರೆ ದುಡಿಯದ ಮಗನನ್ನು ಕಂಡು ತಂದೆಗೆ ಸಹಜವಾಗಿ ಬೇಸರದ ಭಾವನೆಯಿತ್ತು. ಈ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳ ಕೂಡವಾಗುತಿತ್ತು. ಆದರೆ ಮೊನ್ನೆ ಜಗಳದಿಂದ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಮನೆಬಿಟ್ಟು ಹೋದ ಮೈಲಾರಿ, ಈ ಅನಾಹುತವನ್ನು ಮಾಡಿಕೊಂಡಿದ್ದಾನೆ.