ಹಾಸನ: ಜಗಳ ಬಿಡಿಸಲು ಹೋದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹಾಸನದ(Hassan) ಅರಸೀಕೆರೆ(Arsikere) ತಾಲೂಕಿನ ದೋಣನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಲಕ್ಕಪ್ಪ(48) ಕೊಲೆಯಾದ ವ್ಯಕ್ತಿ. ಬಸವರಾಜ ಚಾಕುವಿನಿಂದ ಇರಿದು ಕೊಲೆಗೈದ ಆರೋಪಿ. ಇದನ್ನೂ ಓದಿ:ಕೋವಿಡ್ ಹಗರಣ ಆರೋಪ – ಇಂದು ಅಂತಿಮ ವರದಿ ಸಲ್ಲಿಕೆ
ಶಶಿ ಮತ್ತು ವಸಂತ ಚೌಕಾಬಾರ ಆಡುತ್ತಿದ್ದಾಗ ಬಸವರಾಜ ಬಂದು ಜಗಳ ಮಾಡಿ, ಅವರಿಬ್ಬರ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಲಕ್ಕಪ್ಪ ಜಗಳ ಬಿಡಿಸಲು ಹೋದಾಗ ಬಸವರಾಜ ಚಾಕುವಿನಿಂದ ಎದೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ. ಬಸವರಾಜನ ಜೊತೆಗಿದ್ದ ನಂಜುಂಡಿಯು ಹಲ್ಲೆಗೆ ಬೆಂಬಲ ನೀಡಿದ್ದ ಎಂದ ಆರೋಪ ಕೇಳಿಬಂದಿದೆ. ಇದೀಗ ಆರೋಪಿ ಬಸವರಾಜ ಹಾಗೂ ನಂಜುಂಡಿ ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ವಕ್ಫ್ ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಎಎಪಿ
ಶಶಿ, ವಸಂತ ಎಂಬುವವರಿಗೆ ಬೆನ್ನು ಹಾಗೂ ಕೈ ಭಾಗಕ್ಕೆ ಬಸವರಾಜ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದ. ಗಾಯಾಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಪ್ರಜೆಗೆ ಚಾಕುವಿನಿಂದ ಇರಿದು ಕೊಲೆ
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.