ಬೆಂಗಳೂರು: ನಾಯಿಯೊಂದು (Dog) ಬೊಗಳಿದ್ದಕ್ಕೆ ಅದನ್ನು ವೃದ್ಧನೊಬ್ಬ (Old Man) ಛೂ ಬಿಟ್ಟಿದ್ದಾನೆ ಎಂಬ ಶಂಕೆಯಿಂದ ವ್ಯಕ್ತಿಯೊಬ್ಬ ಚಾಕು ಇರಿದಿರುವ ಘಟನೆ ಮಲ್ಲೇಶ್ವರಂನಲ್ಲಿ (Malleshwara) ನಡೆದಿದೆ.
ಆರೋಪಿ ರಾಜು ವೃದ್ಧ ಬಾಲಸುಬ್ರಹ್ಮಣ್ಯ ಎಂಬವರಿಗೆ ಚಾಕು ಇರಿದಿದ್ದಾನೆ. ರಾಜು ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ನಾಯಿಯೊಂದು ಬೊಗಳಿತ್ತು. ಈ ನಾಯಿಯನ್ನು ವೃದ್ಧನೇ ಬಿಟ್ಟಿದ್ದಾನೆಂದು ಕೋಪಗೊಂಡ ರಾಜು ಚಾಕು ಇರಿದಿದ್ದಾನೆ. ಇದನ್ನೂ ಓದಿ: ಪಲಾವ್‍ನಲ್ಲಿ ವಿಷ ಬೆರೆಸಿ ತಂದೆ-ತಾಯಿಯ ಕೊಲೆಗೈದ ಪಾಪಿ ಪುತ್ರ!
ಘಟನೆ ಬಗ್ಗೆ ಮಲ್ಲೇಶ್ವರಂ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದು, ವೃದ್ಧನಿಗೆ ಚಾಕು ಇರಿದ ಆರೋಪಿ ರಾಜುನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಕುಟುಂಬದ ಯಜಮಾನನ ಕನಸಲ್ಲಿ ದೇವಿ- ದರ್ಗಾ ಪಕ್ಕದಲ್ಲೇ ದೇಗುಲ ನಿರ್ಮಿಸಿ, ಪೂಜೆ
Web Stories