Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಫೋಟೋ ತೆಗೆದಾಗ ಅಪರಿಚಿತರು- ಲವ್ ಆಗೋಕೆ 11 ವರ್ಷಗಳ ಹಿಂದೆಯೇ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದ ದಂಪತಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಫೋಟೋ ತೆಗೆದಾಗ ಅಪರಿಚಿತರು- ಲವ್ ಆಗೋಕೆ 11 ವರ್ಷಗಳ ಹಿಂದೆಯೇ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದ ದಂಪತಿ!

Latest

ಫೋಟೋ ತೆಗೆದಾಗ ಅಪರಿಚಿತರು- ಲವ್ ಆಗೋಕೆ 11 ವರ್ಷಗಳ ಹಿಂದೆಯೇ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದ ದಂಪತಿ!

Public TV
Last updated: March 15, 2018 2:11 pm
Public TV
Share
2 Min Read
china love
SHARE

ಬೀಜಿಂಗ್: ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ, ಅದು ಜನ್ಮ ಜನ್ಮದ ಅನುಬಂಧ ಅನ್ನೋ ಮಾತಿದೆ. ಹಾಗೇ ಮದುವೆ ತಡವಾದ್ರೆ, ಇವನ/ಇವಳ ಹಣೇಲಿ ಬರೆದಿರೋರು ಎಲ್ಲಿದ್ದಾರೋ ಅಂತ ಕೂಡ ಕೆಲವರು ಹೇಳ್ತಾರೆ. ಹಾಗೇ ಜೀವನ ಸಂಗಾತಿಯನ್ನ ಭೇಟಿಯಾಗೋ ಮುಂಚೆಯೇ ಅಪರಿಚಿತರಾಗಿ ಇಬ್ಬರೂ ಒಂದೇ ಕಡೆ ಕಾಣಿಸಿಕೊಂಡಿದ್ದರೆ? ಅಯ್ಯೊ ಏನ್ ಹೇಳ್ತೀರಾ… ಅದೆಲ್ಲಾ ಸಿನಿಮಾದಲ್ಲಿ ಮಾತ್ರ.. ಒಂದು ವೇಳೆ ಒಂದೇ ಸ್ಥಳದಲ್ಲಿ ಓಡಾಡಿದ್ರೂ ಇವರೇ ಅಂತ ಹೇಗೆ ಗೊತ್ತಾಗುತ್ತೆ ಅಂತಿದ್ರೆ ಈ ಸ್ಟೋರಿ ಕೇಳಿ.

ಚೀನಾದ ಈ ದಂಪತಿ ತಾವು ಭೇಟಿಯಾದ 11 ವರ್ಷಗಳ ಹಿಂದೆಯೇ ಕಾಕತಾಳಿಯವೆಂಬಂತೆ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದು, ಇವರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

china love 2

ಚೀನಾದ ಯೀ ಮತ್ತು ಅವರ ಪತ್ನಿ ಕ್ಸೂ 2011ರಲ್ಲಿ ಪರಸ್ಪರ ಭೇಟಿಯಾಗಿ ಲವ್ ಮಾಡಿ ಮದುವೆಯಾಗಿದ್ದು, ಈಗ ಅವರಿಗೆ ಅವಳಿ ಜವಳಿ ಹೆಣ್ಣುಮಕ್ಕಳಿದ್ದಾರೆ. ಆದ್ರೆ ಇವರಿಬ್ಬರು ತಮಗೇ ಗೊತ್ತಿಲ್ಲದಂತೆ 2000 ಇಸವಿಯ ಜುಲೈನಲ್ಲಿ ಒಂದೇ ಸ್ಥಳಕ್ಕೆ ಭೇಟಿ ನೀಡಿದ್ದರು.

ಆಗ ಅಪರಿಚಿತರಾಗಿದ್ದ ಇಬ್ಬರೂ ಕಿಂಗ್ಡಾವೋದ ಮೇ ಫೋರ್ತ್ ಸ್ಕ್ವೇರ್‍ಗೆ ಭೇಟಿ ನೀಡಿದ್ದರು. ಅಷ್ಟೇ ಆಗಿದ್ರೂ ಅದು ಗೊತ್ತಾಗ್ತಿರಲಿಲ್ಲವೇನೋ. ಆದ್ರೆ ಇಬ್ಬರೂ ಒಂದೇ ಸ್ಥಳದಲ್ಲಿ ಅದೇ ಸಮಯಕ್ಕೆ ಫೋಟೋ ತೆಗೆದುಕೊಂಡಿದ್ದರು. ಕ್ಸೂ ತೆಗಿಸಿಕೊಂಡಿದ್ದ ಫೋಟೋದಲ್ಲಿ ಹಿಂಬದಿಯಲ್ಲಿ ವ್ಯಕ್ತಿಯೊಬ್ಬರು ಕಾಣಿಸುತ್ತಾರೆ. ಫೋಟೋ ತೆಗೆದ 11 ವರ್ಷಗಳ ಬಳಿಕ ಅದೇ ವ್ಯಕ್ತಿಯನ್ನ ಭೇಟಿಯಾಗಿ, ಪ್ರೀತಿಸಿ ಮದುವೆಯಾಗಿದ್ದಾರೆ.

ಕ್ಸೂ ತನ್ನ ತಾಯಿಯೊಂದಿಗೆ ಮೇ ಫೋರ್ತ್ ಸ್ಕ್ವೇರ್‍ಗೆ ಹೋಗಿದ್ದರು. ಆಗ ಅವರ ತಾಯಿಗೆ ಮೂರು ತಿಂಗಳ ಹಿಂದಷ್ಟೇ ಆಪರೇಷನ್ ಆಗಿದ್ದು, ವಿಹಾರ್ಕಕಾಗಿ ಅಲ್ಲಿಗೆ ಹೋಗಿದ್ದರು. ಕಾಕತಾಳಿಯವೆಂಬಂತೆ ಯೀ ಕೂಡ ತನ್ನ ಪ್ರವಾಸ ತಂಡದೊಂದಿಗೆ ಸ್ಕ್ವೇರ್‍ಗೆ ಭೇಟಿ ನೀಡಿದ್ದರು. ಯೀ ಅವರ ತಾಯಿ ಪ್ರವಾಸಕ್ಕೆ ಬುಕ್ ಮಾಡಿದ ನಂತರ ಅಪೆಂಡಿಕ್ಸ್ ನಿಂದ ಬಳಲುತ್ತಿದ್ದ ಕಾರಣ ತನ್ನ ಬದಲಿಗೆ ಮಗನಿಗೆ ಪ್ರವಾಸಕ್ಕೆ ಹೋಗುವಂತೆ ಹೇಳಿದ್ದರಿಂದ ಯೀ ಅಲ್ಲಿಗೆ ಭೇಟಿ ನೀಡುವಂತಾಗಿತ್ತು.

china love 1

ಯೀ ತನ್ನ ಹೆಂಡತಿಯ ಫೋಟೋ ನೋಡಿದಾಗ ಹಿಂದೆ ಇರುವ ವ್ಯಕ್ತಿ ತಾನೇ ಎಂಬುದನ್ನ ಕೂಡಲೇ ಕಂಡುಹಿಡಿದಿದ್ದಾರೆ. ಫೋಟೋ ನೋಡಿದಾಗ ನನಗೆ ಆಶ್ಚರ್ಯವಾಯ್ತು. ಜೊತೆಗೆ ಮೈಯೆಲ್ಲಾ ರೋಮಾಂಚನವಾಯ್ತು. ಫೋಟೋಗಳಲ್ಲಿ ನಾನು ಈ ರೀತಿ ಪೋಸ್ ಕೊಡ್ತೀನಿ. ನಾನೂ ಕೂಡ ಅಲ್ಲೇ ಫೋಟೋ ತೆಗೆದುಕೊಂಡಿದ್ದೆ. ಅಲ್ಲೂ ಅದೇ ಪೋಸ್, ಬೇರೆ ಆಂಗಲ್ ಅಷ್ಟೇ ಎಂದು ಯೀ ಇಲ್ಲಿನ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

ಕೊನೆಗೆ ಯೀ ತನ್ನ ಫೋಟೋವನ್ನೂ ಹುಡುಕಿದ್ದು, ಎರಡೂ ಫೋಟೋಗಳನ್ನ ಪಕ್ಕದಲ್ಲಿ ಇಟ್ಟು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕೂಡಲೇ ವೈರಲ್ ಆಗಿದೆ. ದಂಪತಿಯ ಸ್ನೇಹಿತರು ಇದನ್ನ ನೋಡಿ ನಿಮ್ಮಿಬ್ಬರದ್ದು ಹೇಳಿ ಮಾಡಿಸಿದ ಜೋಡಿ ಎಂದು ಕಮೆಂಟ್ ಮಾಡಿದ್ದಾರೆ.

china love 3

TAGGED:chinahusbandlovePublic TVviral photoWifeಗಂಡ-ಹೆಂಡತಿಚೀನಾದಂಪತಿಪಬ್ಲಿಕ್ ಟಿವಿಪ್ರೀತಿಫೋಟೋವೈರಲ್ ಫೋಟೋ
Share This Article
Facebook Whatsapp Whatsapp Telegram

Cinema news

yash mother pushpa compound demolition 1
ಯಶ್‌ ತಾಯಿ ಸೈಟ್‌ ಜಟಾಪಟಿ – ಒಂದೇ ಜಾಗಕ್ಕೆ ಎರಡೆರಡು ದಾಖಲೆ ನೀಡಿ ಅಧಿಕಾರಿಗಳ ಯಡವಟ್ಟು?
Cinema Districts Hassan Karnataka Latest Sandalwood States Top Stories
Rashmika Mandanna Vijay Devarakonda
ಫೆ.2 ಕ್ಕೆ ರಶ್ಮಿಕಾ-ವಿಜಯ್ ಮದುವೆ? ಫೇಕ್ ನ್ಯೂಸ್ ಶುರುವಾಗಿದ್ದು ಎಲ್ಲಿಂದ?
Cinema Latest Top Stories
Actress Jayamala
ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷೆಯಾಗಿ ಹಿರಿಯ ನಟಿ ಜಯಮಾಲಾ ಪದಗ್ರಹಣ
Cinema Latest Sandalwood Top Stories
Pushpa Arunkumar
ಸೈಟ್‌ ವಿಚಾರಕ್ಕೆ ಜಟಾಪಟಿ – ಕೆಡವಿದ್ದ ಕಾಂಪೌಂಡ್‌ ಕಟ್ಟಿಸಲು ಮುಂದಾದ ಯಶ್‌ ತಾಯಿ
Cinema Districts Hassan Karnataka Latest Sandalwood States Top Stories

You Might Also Like

Supreme Court
Karnataka

ದಕ್ಷಿಣ ಪಿನಾಕಿನಿ ಜಲವಿವಾದ – ನ್ಯಾಯಮಂಡಳಿ ಸ್ಥಾಪನೆಗೆ ಸುಪ್ರೀಂ ಆದೇಶ

Public TV
By Public TV
1 hour ago
surya kumar yadav axar patel
Cricket

ಪಾಕ್‌ ಬಹಿಷ್ಕಾರ ಹಾಕಿದ್ರೂ ಲಂಕಾಗೆ ತೆರಳಲಿದೆ ಟೀಂ ಇಂಡಿಯಾ!

Public TV
By Public TV
2 hours ago
gas leak fire accident in kanakapura three dies
Crime

ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ – ಒಂದೇ ಕುಟುಂಬದ ಮೂವರು ದುರ್ಮರಣ

Public TV
By Public TV
3 hours ago
Nepali
Bengaluru City

18 ಕೋಟಿ ದರೋಡೆ ಕೇಸ್‌ | ಮನೆ ಕೆಲಸಕ್ಕೆ ಸೇರಿ ಸಂಚು – ಕೆಲಸ ಬಿಟ್ಟು ದರೋಡೆ ಮಾಡಿದ್ದ ನೇಪಾಳಿ ಗ್ಯಾಂಗ್‌!

Public TV
By Public TV
3 hours ago
CJ Roy
Bengaluru City

ಪಿಸ್ತೂಲ್‌ನಿಂದ ಶೂಟ್ ಮಾಡಿದ್ರೂ ಯಾರಿಗೂ ಗೊತ್ತಾಗಿಲ್ಲ ಯಾಕೆ? – ಚರ್ಚೆಗೆ ಗ್ರಾಸವಾಗಿದ್ದ ಪ್ರಶ್ನೆಗೆ ಸಿಕ್ತು ಉತ್ತರ

Public TV
By Public TV
3 hours ago
Pakistan Cricket Team
Cricket

ಭಾರತದ ವಿರುದ್ಧ ಪಂದ್ಯವಾಡದೇ ಇದ್ದರೆ ಪಾಕಿಗೆ 200 ಕೋಟಿ ನಷ್ಟ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?