ಭೋಪಾಲ್: ಟೋಲ್ ನೀಡದಿದ್ದಕ್ಕೆ ವಾಹನ ಬಿಡಲಿಲ್ಲವೆಂದು ವ್ಯಕ್ತಿಯೊಬ್ಬ ಟೋಲ್‌ಬೂತ್‌ನಲ್ಲಿದ್ದ ಮಹಿಳಾ ಉದ್ಯೋಗಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
A man slapped a woman employee of a toll both in Rajgarh after she refused to let him go without paying the tax. The man is seen angrily walking towards the employee and then slapping her across the face, The woman hits him back with her footwear @ndtv @ndtvindia pic.twitter.com/hmK0ghdImX
— Anurag Dwary (@Anurag_Dwary) August 21, 2022
Advertisement
ಇಲ್ಲಿನ ರಾಜಗಢ-ಭೋಪಾಲ್ ರಸ್ತೆಯಲ್ಲಿರುವ ಕಚ್ನಾರಿಯಾ ಟೋಲ್ ಪ್ಲಾಜಾದಲ್ಲಿ ಘಟನೆ ನಡೆದಿದೆ. ಸ್ಥಳೀಯ ವ್ಯಕ್ತಿಯೇ ಟೋಲ್‌ಬೂತ್‌ನಲ್ಲಿದ್ದ ಮಹಿಳಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾನೆ. ಬಳಿಕ ಮಹಿಳೆ ಚಪ್ಪಲಿ ಹಿಡಿದು ಪ್ರತಿದಾಳಿ ನಡೆಸಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಈ ದೃಶ್ಯಾವಳಿಗಳು ಈಗ ಜಾಲತಾಣದಲ್ಲಿ ಹರಿದಾಡುತ್ತಿವೆ.
Advertisement
ಸ್ಥಳೀಯ ನಿವಾಸಿ ರಾಜ್‌ಕುಮಾರ್ ಗುರ್ಜರ್ ಎಂಬ ವ್ಯಕ್ತಿಯ ಕಾರಿಗೆ ಟೋಲ್ ಪಾವತಿಸಲು ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಯನ್ನು ಒಳಗೊಂಡಿರಲಿಲ್ಲ. ಆದರೆ ಮಹಿಳೆ ಟೋಲ್ ಪಾವತಿಸದೇ ವಾಹನ ಹೋಗಲು ಬಿಡುವುದಿಲ್ಲ ಎಂದಿದ್ದಾರೆ. ಇದರಿಂದ ವಾಗ್ವಾದಕ್ಕಿಳಿದ ವ್ಯಕ್ತಿ ತಾನು ಸ್ಥಳೀಯನಾಗಿದ್ದು ಟೋಲ್‌ನಿಂದ ವಿನಾಯ್ತಿ ನೀಡಬೇಕು ಎಂದು ಹೇಳಿದ್ದಾನೆ. ಆದರೆ ಸ್ಥಳೀಯನೆಂದು ಗುರುತಿಸಲು ಯಾವುದೇ ದಾಖಲೆಗಳೂ ಇರಲಿಲ್ಲ. ಮಾತಿನ ಚಕಮಕಿ ನಡೆಯುತ್ತಲೇ ಮಹಿಳೆ ಮೇಲೆ ದಾಳಿಗೆ ಮುಂದಾಗಿದ್ದಾನೆ.ಇದನ್ನೂ ಓದಿ: ವೈದ್ಯನ ಮೇಲೆ ಹಲ್ಲೆ ನಡೆಸಿದ ಮಿಜೋರಾಂ ಸಿಎಂ ಪುತ್ರಿ – ತಂದೆಯಿಂದಲೇ ಸಾರ್ವಜನಿಕವಾಗಿ ಕ್ಷಮೆ
Advertisement
Advertisement
ಈ ಕುರಿತು ಪ್ರತಿಕ್ರಿಯೆ ನೀಡಿದ ಮಹಿಳೆ ಅನುರಾಧಾ ಡಂಗಿ, ಅವನು ಸ್ಥಳೀಯನೆಂದು ಹೇಳಿದ. ಆದರೆ ನನಗೆ ಆತನ ಪರಿಚಯವೇ ಇರಲಿಲ್ಲ. ನಂತರ ನನ್ನ ಮೇಲ್ವಿಚಾರಕರಿಗೆ ಈ ವಿಷಯ ತಿಳಿಸಿ, ಆತ ಪರಿಚಯವಿಲ್ಲವೆಂದೂ ಹೇಳಿದೆ. ಅವನು ವಾಹನದಿಂದ ಇಳಿದು ನಿಂದನೆ ಮಾಡಲು ಶುರು ಮಾಡಿದ. ಮಾತಿಗೆ ಮಾತು ನೀಡುತ್ತಾ ಕಪಾಳಕ್ಕೆ ಹೊಡೆದ. ನಾನು ಚಪ್ಪಲಿ ಹಿಡಿದು ಪ್ರತಿದಾಳಿ ಮಾಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪುಟಿನ್ ಬ್ರೈನ್ ಎಂದೇ ಹೆಸರಾಗಿದ್ದ ರಷ್ಯಾ ನಾಯಕನ ಪುತ್ರಿ ಕಾರ್ ಬಾಂಬ್ ಸ್ಫೋಟದಿಂದ ಸಾವು
ಘಟನೆ ಸಂಬಂಧ ಟೋಲ್ ಪ್ಲಾಸಾದ ಮಹಿಳೆಯರು ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಹಲ್ಲೆಗೊಳಗಾದ ಮಹಿಳೆ ಅನುರಾಧಾ, ವ್ಯಕ್ತಿ ವಿರುದ್ಧ ಲಿಖಿತ ದೂರು ಸಲ್ಲಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354, 323, 506 ಹಾಗೂ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಸೆಕ್ಷನ್ – 3ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿ ರಾಮಕುಮಾರ್ ರಘುವಂಶಿ ಹೇಳಿದ್ದಾರೆ.