ಮಡಿಕೇರಿ: ನಿವೃತ ಎಸ್ಪಿ ಪುತ್ರನೊಬ್ಬ ವರ್ತಕನ ಮೇಲೆ ರಿವಾಲ್ವಾರ್‌ನಿಂದ (Revolver) ಮೂರು ಸುತ್ತು ಗುಂಡು ಹಾರಿಸಿದ ಘಟನೆ ವಿರಾಜಪೇಟೆ (Virajpet) ತಾಲ್ಲೂಕಿನ ಅಮ್ಮತಿ (Ammathi) ಗ್ರಾಮದಲ್ಲಿ ನಡೆದಿದೆ.
ರಂಜನ್ ಚಿಣ್ಣಪ್ಪ ಎಂಬಾತ ಗುಂಡು ಹಾರಿಸಿದ ವ್ಯಕ್ತಿ. ಸಿದ್ದಾಪುರ (Siddapur) ರಸ್ತೆಯ ವರ್ತಕ ಕೆ.ಬೋಪಣ್ಣ ಅವರ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದು, ಕೂದಲಳೆಯ ಅಂತರದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಡಿಕೆಶಿ ಕುಟುಂಬಕ್ಕೂ ತಟ್ಟಿದ ಚುನಾವಣೆ ಬಿಸಿ – ಹೆಲಿಕಾಪ್ಟರ್ ತಪಾಸಣೆ ವೇಳೆ ಮಾತಿನ ಚಕಮಕಿ
ರಂಜನ್‍ಗೆ ಸೇರಿದ ಮನೆಯ ಮುಂಭಾಗದ ಅಂಗಡಿ ಮಳಿಗೆಯಲ್ಲಿ ಬೊಪಣ್ಣ ಮತ್ತು ಆತನ ಪಾಲುದಾರರು ಅಡಿಕೆ ಮಂಡಿಯನ್ನು ನಡೆಸುತ್ತಿದ್ದರು. ಅಂಗಡಿ ಮಳಿಗೆಯನ್ನು ಖಾಲಿ ಮಾಡುವಂತೆ ಈ ಹಿಂದೆ ರಂಜನ್ ಸೂಚಿಸಿದ್ದ. ಇದಕ್ಕೆ ಬೋಪಣ್ಣ ಕಾಲಾವಕಾಶವನ್ನು ಕೇಳಿದ್ದರು ಎನ್ನಲಾಗಿದೆ. ಮತ್ತೆ ಪುನಃ ರಂಜನ್ ಬೊಪಣ್ಣರವರ ಅಂಗಡಿಗೆ ತೆರಳಿ ಖಾಲಿ ಮಾಡುವಂತೆ ಕೇಳಿಕೊಂಡಾಗ ಇಬ್ಬರ ನಡುವೆ ಮಾತಿನ ಚಕಮುಕಿ ನಡೆದಿದೆ. ಈ ವೇಳೆ ರಂಜನ್ ತನ್ನ ಬಳಿ ಇದ್ದ ರಿವಾಲ್ವಾರ್ ನಿಂದ ಏಕಾಏಕಿ ಗುಂಡು ಹಾರಿಸಿದ್ದಾನೆ.
ಬಳಿಕ ರಂಜನ್ ಮೇಲೆ ಕೂಡ ಹಲ್ಲೆ ನಡೆದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ರಾಜನ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೈನಿಕರ ವಾಹನದ ಮೇಲೆ ದಾಳಿ ಪ್ರಕರಣ – 12 ಶಂಕಿತರು ವಶಕ್ಕೆ