ಲಕ್ನೋ: ಯುವಕನೊಬ್ಬ (Young Man) ಮಹಿಳಾ ಶಿಕ್ಷಕಿಯ (Teacher) ಮೇಲೆ 6 ಗುಂಡುಗಳನ್ನು ಹಾರಿಸಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದ (Uttar Pradesh) ಇಟಾವಾ ಜಿಲ್ಲೆಯ ಇಕ್ದಿಲ್ ಪ್ರದೇಶದ ಪ್ರಾಥಮಿಕ ಶಾಲೆಯೊಂದರಲ್ಲಿ ನಡೆದಿದೆ.
ಮಹಿಳೆಯು ಗಾಯಗೊಂಡಿರುವ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿದ್ದಳು. ಇದನ್ನು ನೋಡಿದ್ದ ಸ್ಥಳೀಯರು ಮಹಿಳೆಯನ್ನು (Woman) ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: Dating App ಬಳಸೋ ಮುನ್ನ ಎಚ್ಚರ- ಒಂಟಿ ಜೀವಗಳನ್ನೇ ಟಾರ್ಗೆಟ್ ಮಾಡಿ ಮೋಸ
ಘಟನೆಗೆ ಸಂಬಂಧಿಸಿ ಇಟಾವಾಹ್ ಎಸ್‍ಪಿ ಮಾಹಿತಿ ನೀಡಿದ್ದು, ಮೊದಲು ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಆದರೆ ನಂತರ ಯುವಕನ ಮೃತ ದೇಹವನ್ನು ಪತ್ತೆಯಾದಾಗಿದೆ ಎಂದರು. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಮಹಿಳೆ ಹಾಗೂ ಯುವಕ ಇಬ್ಬರು ಪರಿಚಿತರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೈಕ್ ಅಡ್ಡ ಹಾಕಿದ ಪೊಲೀಸ್ರು – ನಡುರಸ್ತೆಯಲ್ಲಿ ಗನ್ ಹಿಡಿದು ಓಡುತ್ತಾ, ಶಾಲೆಗೆ ನುಗ್ಗಿದ ಸರಗಳ್ಳರು