Connect with us

Latest

ಹೆಂಡ್ತಿಗೆ ಪತ್ರ ಬರೆದಿಟ್ಟು ಕಾರಿನೊಳಗೇ ಶೂಟೌಟ್ ಮಾಡ್ಕೊಂಡ..!

Published

on

ಥಾಣೆ: ಪತ್ನಿಗೆ ಪತ್ರ ಬರೆದಿಟ್ಟು 36 ವರ್ಷದ ವ್ಯಕ್ತಿಯೊಬ್ಬರು ತನ್ನ ಕಾರೊಳಗೆಯೇ ಶೂಟೌಟ್ ಮಾಡ್ಕೊಂಡ ಆಘಾತಕಾರಿ ಘಟನೆಯೊಂದು ಥಾಣೆಯಲ್ಲಿ ನಡೆದಿದೆ.

ಈ ಘಟನೆ ಭಾನುವಾರ ಸಂಜೆ ನಡೆದಿದೆ. ಶೂಟೌಟ್ ಮಾಡ್ಕೊಂಡ ವ್ಯಕ್ತಿಯನ್ನು ಸಂಕೇತ್ ಹನುಮಂತ್ ಜಾಧವ್ ಎಂದು ಗುರುತಿಸಲಾಗಿದ್ದು, ಇವರು ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದರು. ಲೈಸನ್ಸ್ ಹೊಂದಿರುವ ಗನ್ ನಿಂದಲೇ ಜಾಧವ್ ಈ ಕೃತ್ಯ ಎಸಗಿಕೊಂಡಿದ್ದಾರೆ.

ಏನಿದು ಪ್ರಕರಣ?: ಭಾನುವಾರ ಮಧ್ಯಾಹ್ನದ ಬಳಿಕ ಜಾಧವ್ ಕೆಲಸವಿದೆ ಅಂತ ತನ್ನ ಕಾರು ತೆಗೆದುಕೊಂಡು ಮನೆಯಿಂದ ಹೊರಟಿದ್ದರು. ಅಂತೆಯೇ ಮೀರಾ ರಸ್ತೆಯಿಂದ ನಂಗ್ಲಾ ಚೌಕಿ ಮಧ್ಯೆ ರಸ್ತೆ ಪಕ್ಕ ಜಾಧವ್ ಒಳಗಡೆಯಿಂದ ಲಾಕ್ ಮಾಡಿ ಕಾರು ನಿಲ್ಲಿಸಿದ್ದಾರೆ. ಬಳಿಕ ತನ್ನ ಬಳಿಯಿದ್ದ ಗನ್ ನಿಂದ ಎದೆಗೆ ಗುರಿಯಿಟ್ಟುಕೊಂಡಿದ್ದಾರೆ.

ರಸ್ತೆ ಬದಿಯಲ್ಲಿ ತುಂಬಾ ಹೊತ್ತು ಕಾರು ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಕಾರಿನ ಹಿಂದಿನ ಗ್ಲಾಸನ್ನು ಒಡೆದಿದ್ದಾರೆ. ಈ ವೇಳೆ ಕಾರಿನ ಒಳಗೆ ಡ್ರೈವರ್ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಅಲ್ಲದೇ ವ್ಯಕ್ತಿಯ ಕೈಯಲ್ಲಿ ಗನ್ ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ವ್ಯಕ್ತಿ ತನ್ನ ಕೈಯಿಂದ್ಲೇ ಶೂಟ್ ಮಾಡ್ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಕಂಟ್ರಿವಡಾವಿಲ್ಲ ಠಾಣೆಯ ಪೊಲೀಸರು ಶಂಕಿಸಿದ್ದಾರೆ.

ಪತ್ರದಲ್ಲೇನಿದೆ?: ಮೃತ ವ್ಯಕ್ತಿ ಕುಳಿತಿದ್ದ ಪಕ್ಕದಲ್ಲಿಯೇ ಡೆತ್ ನೋಟ್ ಬಿದ್ದಿದ್ದು ಅದರಲ್ಲಿ, `ಪ್ರತಿ ದಿನದ ಕೆಲಸದಿಂದ ಬಳಲಿದ್ದೇನೆ.. ಕೆಲಸದ ಒತ್ತಡದಿಂದ ನನ್ನ ಖಾಸಗಿ ಜೀವನಕ್ಕೆ ಸಮಯ ಸಿಗುತ್ತಿಲ್ಲ.. ನಿನ್ನೊಂದಿಗೆ ಕಾಲ ಕಳೆಯಲು ನನಗೂ ಸಮಯವಿಲ್ಲ. ಹೀಗಾಗಿ ತುಂಬಾ ನೊಂದಿದ್ದೇನೆ.. ಅಪಾರ್ಥ ಮಾಡಿಕೊಳ್ಳಬೇಡ.. ಕ್ಷಮಿಸಿಬಿಡು ನನ್ನ ಜೀವನವನ್ನು ಕೊನೆಯಾಗಿಸುತ್ತಿದ್ದೇನೆ’ ಅಂತ ಬರೆದಿದ್ದರು.

ಥಾಣೆ ಪುರಸಭಾ ಕಾರ್ಪೋರೇಷನ್ ನಲ್ಲಿ ಗುತ್ತಿಗೆದಾರನಾಗಿ ಜಾಧವ್ ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದರು. 8 ವರ್ಷದ ಹಿಂದೆ ಮದುವೆಯಾಗಿರೋ ಜಾಧವ್ ಅವರಿಗೆ 5ವರ್ಷದ ಮಗನಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *