ಬೆಂಗಳೂರು: ಬರ್ತ್ ಡೇ ಪಾರ್ಟಿ ಹೆಸರಲ್ಲಿ ಮದ್ಯಪಾನ ಮಾಡಿಸಿ ಕೇಳಿದಷ್ಟು ದುಡ್ಡು ಕೊಡ್ತಿವಿ ಸಹಕರಿಸು ಎಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ಏಪ್ರಿಲ್ 24ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವೇಲು ಹಾಗೂ ಆತನ ಸ್ನೇಹಿತರು ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳು. ವೇಲು ತನ್ನ ಗೆಳೆಯನ ಹುಟ್ಟುಹಬ್ಬದ ಪಾರ್ಟಿ ಇದೆ ಎಂದು ಜೀವನ್ ಭೀಮಾನಗರದ ಕ್ಲೌಡ್ ನೈನ್ ಪಬ್ ನಲ್ಲಿ ಆಯೋಜಿಸಿದ್ದ ಬರ್ತ್ ಡೇ ಪಾರ್ಟಿಗೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದನು.
Advertisement
Advertisement
ತನ್ನ ಗೆಳೆಯ ವೇಲು ಕರೆದ ಎಂದು ಮಹಿಳೆ ಬರ್ತ್ ಡೇ ಪಾರ್ಟಿಗೆ ಹೋಗಿದ್ದಾಳೆ. ಪಾರ್ಟಿಯಲ್ಲಿ ವೇಲು ಹಾಗೂ ಆತನ ಸ್ನೇಹಿತರು ಮಹಿಳೆಗೆ ಮದ್ಯಪಾನ ಮಾಡಿಸಿ ಆಕೆ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಆರೋಪಿಗಳು ರಾತ್ರಿ 11ಕ್ಕೆ ಪಾರ್ಟಿ ಶುರು ಮಾಡಿ ತಡರಾತ್ರಿ 1ರವರೆಗೂ ಹುಟ್ಟುಹಬ್ಬ ಪಾರ್ಟಿ ಮಾಡಿದ್ದಾರೆ.
Advertisement
ಮಹಿಳೆ ರಾತ್ರಿ 1 ಗಂಟೆ ಆಯ್ತು ಮನೆಗೆ ತೆರಳಬೇಕು ಎಂದು ಓಲಾ ಕ್ಯಾಬ್‍ಗಾಗಿ ಕಾಯುತ್ತ ಪಬ್‍ನ ಹೊರಗೆ ನಿಂತಿದ್ದಾಳೆ. ಈ ವೇಳೆ ವೇಲು ನಾನೇ ಡ್ರಾಪ್ ಕೊಡ್ತಿವಿ ಬಾ ಎಂದು ಕಾರಿಗೆ ಹತ್ತಿಸಿಕೊಂಡಿದ್ದಾರೆ. ಆಗ ವೇಲು ಜೊತೆಗೆ ಕಾರಿನಲ್ಲಿದ್ದ ಇಬ್ಬರು ಸ್ನೇಹಿತರು ಕೇಳಿದಷ್ಟು ದುಡ್ಡು ಕೊಡ್ತಿವಿ ಸಹಕರಿಸು ಎಂದು ಕೇಳಿದ್ದಾರೆ.
Advertisement
ಇದಕ್ಕೆ ಮಹಿಳೆ ಒಪ್ಪದಿದ್ದಾಗ ಕಾರಿನಲ್ಲಿ ಆಕೆಯ ಮುಖದ ಮೇಲೆ ಹಲ್ಲೆ ಮಾಡಿದ್ದಲ್ಲದ್ದೇ, ಮೈ-ಕೈ ಮುಟ್ಟಿ ಕಿರುಕುಳ ನೀಡಿದ್ದಾರೆ. ಈ ವೇಳೆ ಮಹಿಳೆ ಸೇವ್ ಮೀ.. ಸೇವ್ ಮಿ.. ಎಂದು ಕಿರುಚಲು ಶುರು ಮಾಡಿದಾಗ ಆರೋಪಿಗಳು ಆಕೆಯನ್ನು ಕಾರಿನಿಂದ ಕೆಳಕ್ಕೆ ತಳ್ಳಿದ್ದಾರೆ.
ಈ ಘಟನೆಯಲ್ಲಿ ಮಹಿಳೆಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 34, 504, 354 ಅಡಿ ಪ್ರಕರಣ ದಾಖಲಾಗಿದೆ.