9 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟ ಯುವಕ

Public TV
1 Min Read
uttar pradesh boy

ಲಕ್ನೋ: ಉತ್ತರ ಪ್ರದೇಶದ ಮುಜಾಫರ್‍ನಗರ ಜಿಲ್ಲೆಯ ಪಿನ್ನಾ ಗ್ರಾಮದಲ್ಲಿ ಯುವಕನೊಬ್ಬ 9 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ಸೋಮವಾರದಂದು ನಡೆದಿದೆ.

ಪಿನ್ನಾ ಗ್ರಾಮದ ನಿವಾಸಿ ಪ್ರವೀನ್ ಕುಮಾರ್ (20) ಕಿರುಕುಳ ಕೊಟ್ಟಿರುವ ಆರೋಪಿ. ಪ್ರವೀನ್ ತನ್ನ ಮನೆ ಹತ್ತಿರವಿದ್ದ ಬಾಲಕನನ್ನು ಗದ್ದೆಗೆ ಕರೆದೊಯ್ದು ಆತನಿಗೆ ಲೈಂಗಿಕ ಕಿರುಕುಳ ನೀಡಿ, ಈ ವಿಷಯವನ್ನು ಯಾರ ಬಳಿಯು ಹೇಳಬಾರದು ಎಂದು ಹೆದರಿಸಿದ್ದನು. ಆದರೆ ಘಟನೆಯಿಂದ ಭಯಗೊಂಡಿದ್ದ ಬಾಲಕ ಮನೆಗೆ ಬಂದು ತನ್ನ ತಂದೆಗೆ ನಡೆದ ವಿಷಯವನ್ನು ತಿಳಿಸಿದ್ದಾನೆ.

ಮಾಹಿತಿ ತಿಳಿದ ತಕ್ಷಣ ಬಾಲಕನ ತಂದೆ ಆರೋಪಿ ಪ್ರವೀಣ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ತರಹದ ಘಟನೆಗಳು ಹಿಂದೆಯು ನಡೆದಿತ್ತು. ಮಥುರಾದಲ್ಲಿ ಒಬ್ಬ ಬಾಲಕನಿಗೆ ಇಬ್ಬರು ಯುವಕರು ಲೈಂಗಿಕ ಕಿರುಕುಳವನ್ನು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಸಲ್ಮಾನ್ ಹಾಗೂ ಹಾಸಿನ್ ಎಂಬ ಆರೋಪಿಗಳನ್ನು ಸೋಮವಾರವಷ್ಟೆ ಬಂಧಿಸಿದ್ದೇವೆ. ಆರೋಪಿ ಪ್ರವೀಣ್‍ನನ್ನು ಕೂಡ ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಮುಜಾಫರ್‍ನಗರದ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *