ರಾಜ್‍ಕೋಟ್: ನಡುರಸ್ತೆಯಲ್ಲಿಯೇ ಜೀಪ್ ಸ್ಟಾರ್ಟಾಗದೆ ನಿಂತ ಪರಿಣಾಮ ಕೋಪಗೊಂಡ ವ್ಯಕ್ತಿ ತನ್ನ ಜೀಪಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಗುಜರಾತ್‍ನ ರಾಜಕೋಟ್‍ನಲ್ಲಿ ಘಟನೆ ನಡೆದಿದ್ದು, ಇಂದ್ರಜೀತ್ ಸಿಂಗ್ ತನ್ನ ಜೀಪಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವ್ಯಕ್ತಿ. ಈ ಎಲ್ಲಾ ದೃಶ್ಯಗಳನ್ನು ಆತನ ಸ್ನೇಹಿತ ಹಾಗೂ ಸಾರ್ವಜನಿಕರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ ಟಿಕ್‍ಟಾಕ್‍ನಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ವೈರಲ್ ಮಾಡಿದ್ದಾರೆ. ವಿಡಿಯೋದಲ್ಲಿ ಇಂದ್ರಜೀತ್ ತನ್ನ ಇಷ್ಟದಂತೆ ಜೀಪ್‍ಗೆ ಹೊಸ ವಿನ್ಯಾಸಗಳನ್ನು ಮಾಡಿಸಿರುವುದು ಕಾಣಬಹುದಾಗಿದೆ. ಅಲ್ಲದೇ ಜೀಪ್‍ಗೆ ಬೆಂಕಿ ಹಚ್ಚಿ ವಿಡಿಯೋ ಮಾಡುತ್ತಿರುವ ಸ್ನೇಹಿತ ಕಡೆ ಇಂದ್ರಜೀತ್ ನಡೆದು ಬಂದಿದ್ದಾನೆ.
Check out this person setting his jeep on fire for a tik tok video in Rajkot.. Hope there’s some action. Let’s make him more famous.. @hvgoenka pic.twitter.com/eO5HgfilSq
— Dinesh Joshi. (@dineshjoshi70) September 3, 2019
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದು, ಇಂದ್ರಜೀತ್ ಸಿಂಗ್ ಸೇರಿದಂತೆ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ. ನಡುರಸ್ತೆಯಲ್ಲಿ ಜೀಪ್‍ಗೆ ಬೆಂಕಿ ಹಚ್ಚುವ ಮೂಲಕ ಸರ್ಕಾರಿ ಆಸ್ತಿಗೆ ನಷ್ಟ ಉಂಟುಮಾಡಿರುವ ಆರೋಪದಲ್ಲಿ ಅವರನ್ನು ಬಂಧಿಸಿದ್ದಾರೆ.
ಈ ಘಟನೆ ಕುರಿತು ಮಾಹಿತಿ ನೀಡಿರುವ ರಾಜ್‍ಕೋಟ್ ಎಸ್‍ಪಿ ಎಎನ್ ರಾಥೋಡ್, ಜೀಪಿನ ಬ್ಯಾಟರಿ ಕೆಲಸ ಮಾಡದ ಕಾರಣ ಅದು ಸ್ಟಾರ್ಟ್ ಆಗಿರಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಇಂದ್ರಜೀತ್ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

