ನವದೆಹಲಿ: ಯುವಕನೊಬ್ಬ ತನ್ನ ಗೆಳತಿ ಜೊತೆ ಜಗಳವಾಡಿ ಆಟೋದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ರಾತ್ರಿ ನವದೆಹಲಿಯಲ್ಲಿ ನಡೆದಿದೆ.
ಶಿವಂ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಆಟೋದಲ್ಲಿ ಶಿವಂ ಜೊತೆ ಆತನ ಸಹೋದರ ಅರ್ಜುನ್ ಹಾಗೂ ಸಹ ಪ್ರಯಾಣಿಕ ಕೂಡ ಇದ್ದರು. ಹಾಗಾಗಿ ಶಿವಂ ಆತ್ಮಹತ್ಯೆಗೆ ಯತ್ನಿಸಿದ್ದಾಗ ಮೂವರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಂ ದೇಹ ಶೇ. 70ರಷ್ಟು ಸುಟ್ಟು ಹೋಗಿದ್ದು, ಆತನ ಸಹೋದರ ಅರ್ಜುನ್ ದೇಹ ಶೇ.20ರಷ್ಟು ಸುಟ್ಟು ಹೋಗಿದೆ. ಇವರ ಜೊತೆ ಇದ್ದ ಸಹ-ಪ್ರಯಾಣಿಕ ಭಾಗವಾನ್ ಸಿಂಗ್(60) ಸಣ್ಣಪುಟ್ಟ ಗಾಯಗಳಾಗಿದ್ದು, ಮೂವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
Advertisement
Advertisement
ಶಿವಂ ಗಜೀಯಾಬಾದ್ ನಿವಾಸಿಯಾಗಿದ್ದು, ತನ್ನ ಸಹೋದರ ಅರ್ಜುನ್ ಜೊತೆ ಆಟೋದಲ್ಲಿ ಲೋನಿಗೆ ತೆರಳುತ್ತಿದ್ದನು. ಈ ವೇಳೆ ಶಿವಂ ಆಕೆಯ ಗೆಳತಿ ಜೊತೆ ಮೊಬೈಲಿನಲ್ಲಿ ಮಾತನಾಡುತ್ತಿದ್ದನು. ಬಳಿಕ ಅವರಿಬ್ಬರ ನಡುವೆ ಫೋನಿನಲ್ಲೇ ವಾದ ನಡೆದಿದೆ. ಇದರಿಂದ ಬೇಸರಗೊಂಡ ಶಿವಂ ತನ್ನ ಜಾಕೆಟ್‍ನಲ್ಲಿ ಪೆಟ್ರೋಲ್ ಬಾಟಲ್ ತೆಗೆದು ಮೈಮೇಲೆ ಸುರಿದುಕೊಂಡು ಲೈಟರ್ ನಿಂದ ಬೆಂಕಿ ಹಚ್ಚಿಕೊಂಡು ಆತ್ನಹತ್ಯೆಗೆ ಯತ್ನಿಸಿದ್ದಾನೆ.
Advertisement
ಶಿವಂ ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆ ತಕ್ಷಣ ಚಾಲಕ ಆಟೋ ನಿಲ್ಲಿಸಿ ಸ್ಥಳೀಯರ ಸಹಾಯ ಪಡೆದಿದ್ದಾರೆ. ಬಳಿಕ ಸ್ಥಳೀಯರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶಿವಂ ವಿರುದ್ಧ ಆತ್ಮಹತ್ಯೆಗೆ ಯತ್ನ ದೂರು ದಾಖಲಿಸಿಕೊಂಡಿದ್ದಾರೆ. ಈ ವೇಳೆ ಶಿವಂ ತನ್ನೊಂದಿಗೆ ಪೆಟ್ರೋಲ್ ಬಾಟಲ್ ಏಕೆ ಇಟ್ಟುಕೊಂಡಿದ್ದನೋ ಗೊತ್ತಿಲ್ಲ ಎಂದು ಆತನ ಸಂಬಂಧಿಕರು ತಿಳಿಸಿದ್ದಾರೆ. ಶಿವಂ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದು ಆತನ ಹೇಳಿಕೆ ಪಡೆಯಲು ಆಗಲಿಲ್ಲ ಎಂದು ಡಿಸಿಪಿ ಅತುಲ್ ಠಾಕೂರ್ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv