ವಾಷಿಂಗ್ಟನ್: ತನಗೆ ಚಿಕನ್ ಬಿರಿಯಾನಿ (Chicken) ಕೊಡಲಿಲ್ಲವೆಂದು ನ್ಯೂಯಾರ್ಕ್‌ನಲ್ಲಿರುವ ಬಾಂಗ್ಲಾದೇಶಿ ರೆಸ್ಟೋರೆಂಟ್‌ಗೆ (Restorent) ಪೆಟ್ರೋಲ್ (Petrol) ಸುರಿದು ಬೆಂಕಿ ಹಚ್ಚಿರುವ ಘಟನೆ ನ್ಯೂಯಾರ್ಕ್ (NewYork) ನಗರದಲ್ಲಿ ನಡೆದಿದೆ.
ಇಲ್ಲಿನ ಜಾಕ್ಸನ್ ಹೈಟ್ಸ್‌ನಲ್ಲಿರುವ ಇಟ್ಟಾಡಿ ಗಾರ್ಡನ್ ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ 49 ವರ್ಷದ ಚೋಫೆಲ್ ನಾರ್ಬು ನನ್ನು ನ್ಯೂಯಾರ್ಕ್ ಪೊಲೀಸರು (NewYork Police) ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕ್ರಿಮಿನಲ್ (Criminal Case) ಆರೋಪ ಹೊರಿಸಲಾಗಿದೆ. ಇದನ್ನೂ ಓದಿ: ಕೇರಳ ಶೈಲಿಯ ರುಚಿಕರ ಸಿಗಡಿ ರೋಸ್ಟ್ ಮಾಡಿ ನೋಡಿ
Advertisement
View this post on Instagram
Advertisement
ಬಂಧನದ ಬಳಿಕ ಆರೋಪಿ, ನಾನು ತುಂಬಾ ಕುಡಿದಿದ್ದೆ ಕುಡಿದಿದ್ದರಿಂದ ನನಗೆ ಹುಚ್ಚು ಹಿಡಿದಂತಾಗಿತ್ತು. ಹಾಗಾಗಿ ಚಿಕನ್ ಬಿರಿಯಾನಿ ಖರೀದಿಸಲು ಹೋದೆ. ಆದರೆ ನನಗೆ ಬಿರಿಯಾನಿ ಕೊಡಲಿಲ್ಲ. ಆದ್ದರಿಂದ ಗ್ಯಾಸ್ ಕ್ಯಾನ್ ಖರೀದಿಸಿ, ರೆಸ್ಟೋರೆಂಟ್ ಸುಡಲು ಮುಂದಾದೆ ಎಂದು ಹೇಳಿಕೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಅಮೆರಿಕಾದಲ್ಲಿ ಕಾಂತಾರ ನೋಡಿ ಭಾವುಕರಾದ ನಟ ಜಗ್ಗೇಶ್
Advertisement
Advertisement
ಘಟನೆ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸರೆಯಾಗಿದೆ. ಅಲ್ಲದೇ ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚುವ ವೇಳೆ ಆರೋಪಿಗೂ ಬೆಂಕಿ ತಗುಲಿದೆ. ಈ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದೆ.