ಅಮರಾವತಿ: ವ್ಯಕ್ತಿಯೊಬ್ಬ ಮದ್ಯ (Alcohol) ಕೊಡಲಿಲ್ಲ ಎಂದು ವೈನ್ ಶಾಪ್‌ಗೇ (Wine Shop) ಬೆಂಕಿ (Fire) ಹಚ್ಚಿದ ಘಟನೆ ವಿಶಾಖಪಟ್ಟಣಂನ (Visakhapatnam) ಮಧುರ್ವಾಡ (Madurwada) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ. ವೈನ್ ಶಾಪ್‌ಗೆ ಬೆಂಕಿ ಇಟ್ಟ ವ್ಯಕ್ತಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.
ಆರೋಪಿಯನ್ನು ಮಧು ಎಂದು ಗುರುತಿಸಲಾಗಿದೆ. ಆತ ಮಧುವಾಡ ಬಡಾವಣೆಯ ವೈನ್ ಶಾಪ್‌ಗೆ ತಡರಾತ್ರಿ ಬಂದಿದ್ದ. ವೈನ್ ಶಾಪ್ ಮುಚ್ಚುವ ಸಮಯವಾಗಿದ್ದರಿಂದ ಶಾಪ್ ಸಿಬ್ಬಂದಿ ಮದ್ಯ ನೀಡಲು ನಿರಾಕರಿಸಿದ್ದಾರೆ. ಇದರಿಂದ ಆರೋಪಿ ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ಉಂಟಾಗಿದೆ. ಬಳಿಕ ಆತನಿಗೆ ಎಚ್ಚರಿಕೆ ನೀಡಿದ ಬಳಿಕ ಆತ ಅಲ್ಲಿಂದ ತೆರಳಿದ್ದಾನೆ.
Advertisement
Advertisement
ಎಚ್ಚರಿಕೆ ನೀಡಿದ್ದಕ್ಕೆ ಸಿಟ್ಟಾಗಿದ್ದ ಮಧು ಭಾನುವಾರ ಸಂಜೆ ಪೆಟ್ರೋಲ್ ಟ್ಯಾಂಕ್‌ನೊಂದಿಗೆ ವೈನ್ ಶಾಪ್‌ಗೆ ವಾಪಸ್ ಬಂದಿದ್ದಾನೆ. ವೈನ್ ಶಾಪ್ ಒಳಗಡೆ ಮಾತ್ರವಲ್ಲದೆ ಸಿಬ್ಬಂದಿ ಮೇಲೂ ಪೆಟ್ರೋಲ್ ಅನ್ನು ಸುರಿದು ತಕ್ಷಣ ಬೆಂಕಿ ಹಚ್ಚಿದ್ದಾನೆ. ಈ ವೇಳೆ ಸಿಬ್ಬಂದಿ ಅಂಗಡಿಯಿಂದ ಹೊರಕ್ಕೆ ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಅಂಗಡಿ ಸುಟ್ಟು ಹೋಗಿದ್ದು, ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ 1.5 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಗ್ನಿ ಅವಘಡ – ಐಟಿ ಕಂಪನಿ ಭಾಗಶಃ ಭಸ್ಮ
Advertisement
Advertisement
ಇದೀಗ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 307 ಮತ್ತು 436ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್‌ಪೆ ಕ್ಟರ್ ರಾಮಕೃಷ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ – 5.8 ಕೋಟಿ ರೂ. ಹಣ ಸಂಗ್ರಹ