ಚಿಕ್ಕಬಳ್ಳಾಪುರ: ಅಣ್ಣ-ತಮ್ಮಂದಿರ ಮೇಲೆ ಹಲ್ಲೆ ಮಾಡಿ ಆಸ್ಪತ್ರೆಯಲ್ಲಿ ರಂಪಾಟ ಮಾಡ್ತಿದ್ದ ಅಸಾಮಿಗೆ ಎಎಸ್‍ಐ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು. ಪೊಲೀಸಪ್ಪನ ಫಾಲೋ ಮಾಡಿಕೊಂಡು ಹೋಗಿ ಮನೆಯ ಮುಂದೆ ನಿಲ್ಲಿಸಿದ್ದ ಹೊಸ ಸ್ಕೂಟಿಗೆ ಬೆಂಕಿ ಹಚ್ಚಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿವೇಕಾನಂದ ನಗರದಲ್ಲಿ ನಡೆದಿದೆ.
ಗುಡಿಬಂಡೆ ನಗರದ ಹಣ್ಣಿನ ವ್ಯಾಪಾರಿ ಖಲೀಂ ಉಲ್ಲಾ ತನ್ನ ಸಹೋದರರ ಜೊತೆ ಗಲಾಟೆ ಮಾಡಿಕೊಂಡು ಆಸ್ಪತ್ರೆಗೆ ಆಗಮಿಸಿದ್ದು ಆಸ್ಪತ್ರೆಯಲ್ಲಿ ವಿನಾಕಾರಣ ಕೂಗಾಟ ನಡೆಸಿ ರಂಪಾಟ ಮಾಡ್ತಿದ್ದ. ವಿಷಯ ತಿಳಿದು ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಎಎಸ್‍ಐ ನಂಜುಂಡ ಶರ್ಮಾ ಸೇರಿ ಇತರೆ ಪೊಲೀಸರು ಹೋಗಿ ಅಸಾಮಿ ಖಲೀಂ ಉಲ್ಲಾಗೆ ಬೈದು ಬುದ್ಧಿವಾದ ಹೇಳಿದ್ದರು.
ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋದ ಖಲೀಂ ಉಲ್ಲಾ ಮತ್ತೆ ಸಹೋದರರ ಮನೆಯ ಬಳಿ ಇದ್ದ ಕಾರು ಗಾಜು ಹೊಡೆದು ಬೆಂಕಿ ಹಚ್ಚಲು ಮುಂದಾಗಿದ್ದ. ಮತ್ತೆ ಮನೆ ಬಳಿ ಹೋದ ಪೊಲೀಸರು ಬೈದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದೇ ಜಿದ್ದಿನ ಮೇರೆಗೆ ಮುಂಜಾನೆ ಮನೆಗೆ ತೆರಳಿದ್ದ ಎಎಸ್ ಐ ನಂಜುಂಡ ಶರ್ಮಾರನ್ನ ಫಾಲೋ ಮಾಡಿರುವ ಖಲೀಂಉಲ್ಲಾ ನಂಜುಂಡ ಶರ್ಮಾ ಮನೆ ಮುಂದೆ ನಿಲ್ಲಿಸಿ ಮನೆ ಓಳಭಾಗಕ್ಕೆ ಹೋದ ಕೂಡಲೇ ಹೊಸ ಸ್ಕೂಟಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದನ್ನೂ ಓದಿ: Karnataka Bandh : ಶಾಲಾ, ಕಾಲೇಜುಗಳಿಗೆ ರಜೆ ನೀಡೋ ಅಧಿಕಾರ ಡಿಸಿಗಳಿಗೆ ಬಿಟ್ಟ ಶಿಕ್ಷಣ ಇಲಾಖೆ
ಈ ಸಂಬಂಧ ಖಲೀಂ ಉಲ್ಲಾ ನನ್ನ ಗುಡಿಬಂಡೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Web Stories