ಚಿಕ್ಕಮಗಳೂರು: ಶೃಂಗೇರಿ ಶ್ರೀಗಳಿಗೆ ಅಪಮಾನ ಮಾಡಿದ್ದ ವ್ಯಕ್ತಿಗೆ ಶೃಂಗೇರಿ ಕೋರ್ಟ್ ಮೂರು ವರ್ಷ ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಶೃಂಗೇರಿ ಹಿಂದೂಸ್ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಶೃಂಗೇರಿ ಶ್ರೀ ಮಠದ ಗುರುಪರಂಪರೆ ಕುರಿತ ಮಾಹಿತಿ ನೀಡುವ ಪೋಸ್ಟ್ ಹಾಕಲಾಗಿತ್ತು. ಅದರಲ್ಲಿ ಶೃಂಗೇರಿ ಶ್ರೀಗಳ ಫೋಟೋ ಸಹ ಇತ್ತು. ಈ ಪೋಸ್ಟ್‌ಗೆ 2015ರ ನವೆಂಬರ್ 19ರಂದು ಹುಬ್ಬಳ್ಳಿ ಮೂಲದ ಮುನ್ನಾ ಅಜರ್ ಅವಾಚ್ಯ ಪದಗಳನ್ನು ಬಳಸಿ ಆಕ್ಷೇಪಾರ್ಹ ಕಮೆಂಟ್ ಹಾಕಿದ್ದ. ಈ ಕುರಿತು ಶೃಂಗೇರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಶೃಂಗೇರಿ ಮಠದ ಭಕ್ತರು ಪ್ರತಿಭಟನೆ ನಡೆಸಿ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದರು.
Advertisement
Advertisement
ಈ ಬಗ್ಗೆ ತನಿಖೆ ಕೈಗೊಂಡ ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿ ಕೆಲವೇ ದಿನಗಳಲ್ಲಿ ಆರೋಪಿಯನ್ನು ಬಂಧಿಸಿದ್ದರು. ಶೃಂಗೇರಿ ಠಾಣೆಯ ವೃತ್ತ ನಿರೀಕ್ಷಕರಾಗಿದ್ದ ಸುಧೀರ್ ಹೆಗ್ಡೆ ನೇತೃತ್ವದ ತನಿಖಾ ತಂಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಇದನ್ನೂ ಓದಿ: ಮಳೆ ನಿಲ್ಲಲು ಶೃಂಗೇರಿ ಜಗದ್ಗುರುಗಳ ಮೊರೆ ಹೋದ ಬಿಜೆಪಿ, ಕಾಂಗ್ರೆಸ್
Advertisement
ಸುದೀರ್ಘ ವಿಚಾರಣೆಯ ನಡೆಸಿದ ಶೃಂಗೇರಿ ಕೋರ್ಟ್ ನ್ಯಾಯಾಧೀಶ ಕ್ರಾಂತಿಕುಮಾರ್ ಮುನ್ನಾ ಅಜರ್‌ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಆರೋಪಿಯ ವಿರುದ್ಧವಾಗಿ ವಕೀಲೆ ಹರೀಣಾಕ್ಷಿ ವಾದ ಮಂಡಿಸಿದ್ದರು.