ಅಹಮದಾಬಾದ್: ಪತಿಯೊಬ್ಬ ತನ್ನ ಪತ್ನಿಗೆ ಗಡ್ಡ ಬೆಳೆದಿದೆ ಎಂದು ಹೇಳಿ ಗುಜರಾತ್‍ನ ಅಹಮದಾಬಾದ್‍ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ.
ತನ್ನ ಪತ್ನಿಯ ಮುಖದಲ್ಲಿ ಗಡ್ಡ ಬೆಳೆಯುತ್ತಿದೆ ಹಾಗೂ ಆಕೆ ಪುರುಷರ ಧ್ವನಿಯಲ್ಲಿ ಮಾತನಾಡುತ್ತಾಳೆ ಎಂದು ಹೇಳಿ ಪತಿ ವಿಚ್ಛೇದನ ಅರ್ಜಿ ಹಾಕಿದ್ದನು. ಆದರೆ ಕೌಟುಂಬಿಕ ನ್ಯಾಯಾಲಯ ಆತನ ಅರ್ಜಿಯನ್ನು ತಿರಸ್ಕರಿಸಿದೆ.
Advertisement
ಆರೋಪ ಏನು?
ಪತ್ನಿಯ ಕುಟುಂಬದವರು ನನಗೆ ಮೋಸ ಮಾಡಿದ್ದಾರೆ. ಮದುವೆ ಮುಂಚೆ ಪತ್ನಿಯ ಮುಖದಲ್ಲಿ ಕೂದಲು ಇದ್ದಿದ್ದು ನನಗೆ ಗೊತ್ತಿರಲಿಲ್ಲ ಹಾಗೂ ಆಕೆ ಪುರುಷರ ಧ್ವನಿಯಲ್ಲಿ ಮಾತನಾಡುತ್ತಾಳೆ ಎಂದು ನನಗ ತಿಳಿದಿರಲಿಲ್ಲ ಎಂದು ಪತಿ ಅರ್ಜಿಯಲ್ಲಿ ಉಲ್ಲೇಖಿಸಿದ್ದನು.
Advertisement
ನಾನು ಮೊದಲು ಬಾರಿ ಭೇಟಿಯಾದಾಗ ಆಕೆ ದುಪ್ಪಟ್ಟಾ ಧರಿಸಿದ್ದಳು. ಆಗ ನನಗೆ ಆಕೆಯ ಮುಖ ನೋಡಲಿಲ್ಲ. ನಮ್ಮ ಸಂಪ್ರಾದಾಯದ ಪ್ರಕಾರ ಮದುವೆ ಮೊದಲು ಪತ್ನಿಯ ಮುಖವನ್ನು ನೋಡುವ ಹಾಗೇ ಇಲ್ಲ ಎಂದು ಪತಿ ಅರ್ಜಿಯಲ್ಲಿ ಮಾಹಿತಿ ನೀಡಿದ್ದ.
Advertisement
ಪತ್ನಿ ಕೊಟ್ಟ ಉತ್ತರ ಏನು?
ಪತಿಯ ಅರ್ಜಿಗೆ ಪತ್ನಿ ಪರ ವಕೀಲರು, ಹಾರ್ಮೋನ್ ಸಮಸ್ಯೆಯಿಂದ ನನ್ನ ಕಕ್ಷೀದಾರರ ಮುಖದ ಮೇಲೆ ಕೂದಲು ಬೆಳೆದಿದೆ. ಆದರೆ ಚಿಕಿತ್ಸೆ ಪಡೆದು ಈ ಗಡ್ಡವನ್ನು ತೆಗೆಯಿಸಬಹುದು. ಆದರೆ ಮನೆಯಿಂದ ಹೊರಹಾಕಲು ಪತಿ ಈ ಆರೋಪ ಮಾಡಿ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
Advertisement
ಪತ್ನಿ ಕಡೆಯ ವಕೀಲರು ಅರ್ಜಿ ಸಲ್ಲಿಸಿದ ನಂತರ ಪತಿ ಕೋರ್ಟ್ ಕಡೆ ತಿರುಗಿಯೂ ನೋಡಿಲ್ಲ. ಮುಂದಿನ ವಿಚಾರಣೆಗೆ ಪತಿ ಕೋರ್ಟ್‍ಗೆ ಹಾಜರಾಗಲಿಲ್ಲ. ಹಾಗಾಗಿ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ.