ಮುಂಬೈ: ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರಿಂದ ಬೇಸರಗೊಂಡ ನೌಕರನೊಬ್ಬ, ಕುದುರೆ ಸವಾರಿ ಮಾಡಿಕೊಂಡು ಆಫೀಸ್‍ಗೆ ಹೋಗುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಶೇಖ್ ಯೂಸುಫ್ ಅವರು ವೈಬಿ ಚವಾನ್ ಫಾರ್ಮಸಿ ಕಾಲೇಜ್‍ನಲ್ಲಿ ಲ್ಯಾಬ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್-19 ಲಾಕ್‍ಡೌನ್ ಸಮಯದಲ್ಲಿ ಪ್ರಯಾಣ ಮಾಡಲು ಕಷ್ಟವಾಗುತ್ತಿತ್ತು. 15 ಕಿಲೋಮೀಟರ್ ದೂರದಲ್ಲಿರುವ ತನ್ನ ಕೆಲಸದ ಸ್ಥಳಕ್ಕೆ ಪ್ರಯಾಣಿಸುವುದು ಹೇಗೆ ಎನ್ನುವ ಆಲೋಚನೆ ಮಾಡುವಾಗ ಕುದುರೆಯನ್ನು ಖರೀದಿಸುವ ಉಪಾಯ ಹೊಳೆದಿದೆ. ಆಗ 40,000 ರೂಪಾಯಿ ಕೊಟ್ಟು ‘ಜಿಗರ್’ ಹೆಸರಿನ ಒಂದು ಕುದುರೆಯನ್ನು ಖರೀದಿಸಿದ್ದರು.
Advertisement
Advertisement
ಶೇಖ್ ಯೂಸುಫ್ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಲಾಕ್‍ಡೌನ್ ಸಮಯದಲ್ಲಿ, ನನ್ನ ಬೈಕ್ ಹಾಳಾಗಿತ್ತು. ಪೆಟ್ರೋಲ್ ಬೆಲೆ ಹೆಚ್ಚಾಗಿತ್ತು. ಸಾರ್ವಜನಿಕ ಸಾರಿಗೆಯು ಚಲಿಸಲಿಸುತ್ತಿರಲಿಲ್ಲ. ಆಗಿನಿಂದ ನಾನು ಕುದುರೆಯನ್ನು ಪ್ರಯಾಣಿಸಲು ಬಳಸುತ್ತೇನೆ. ಇದು ನನ್ನನ್ನು ಫಿಟ್ ಮತ್ತು ಆರೋಗ್ಯಕರವಾಗಿರಿಸುತ್ತದೆ. ಇಂಧನ ಬೆಲೆಗಳ ಹೆಚ್ಚಳವನ್ನು ಗಮನಿಸಿದರೆ, ಕುದುರೆಯು ಸಾರಿಗೆಗಿಂತ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್ ಐತಿಹಾಸಿಕ ತೀರ್ಪು
Advertisement
Advertisement
ಜಿಗರ್, ಕಥಿಯಾವಾರಿ ತಳಿಯ ನಾಲ್ಕು ವರ್ಷದ ಕಪ್ಪು ಕುದುರೆಯಾಗಿದೆ. ಇಂದಿಗೂ ನನ್ನ ಕುದುರೆಯನ್ನು ಪ್ರಯಾಣಿಸಲು ಬಳಸುತ್ತೇನೆ. ಇದು ನಮ್ಮನ್ನು ಫಿಟ್ ಮತ್ತು ಆರೋಗ್ಯಕರವಾಗಿರಿಸುತ್ತದೆ. ಈ ವಿಚಾರವನ್ನು ನೆರೆಹೊರೆಯಲ್ಲಿ ಸಾಕಷ್ಟು ಇಷ್ಟಪಟ್ಟಿದ್ದಾರೆ ಎಂದು ಹೇಳಿದ್ದಾರೆ.