ದಾವಣಗೆರೆ: ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ವೃದ್ದನನ್ನು ವ್ಯಕ್ತಿಯೊಬ್ಬರು ರಕ್ಷಣೆ ಮಾಡಿದ ಘಟನೆ ದಾವಣಗೆರೆಯ ದೇವರಾಜ್ ಅರಸ್ ಬಡಾವಣೆಯ ಬಳಿ ನಡೆದಿದೆ.
ದಾವಣಗೆರೆಯ ವಿನಾಯಕ ನಗರದ ವೃದ್ಧ ಕೌಟುಂಬಿಕ ಕಲಹದಿಮದ ಬೇಸತ್ತು, ರೈಲ್ವೆ ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಕಂಡ ಸ್ಥಳೀಯರಾದ ವಿರೂಪಾಕ್ಷ ಬೆಳಗುತ್ತಿ ಅವರನ್ನು ರಕ್ಷಿಸಿದ್ದಾರೆ. ವೃದ್ಧನನ್ನು ರಕ್ಷಿಸಿದ 30 ಸೆಕೆಂಡ್‍ನಲ್ಲಿ ರೈಲು ಆ ಮಾರ್ಗದಲ್ಲಿ ಸಂಚರಿಸಿದೆ. ಇದನ್ನೂ ಓದಿ: ಗಿರೀಶ್ ಮಟ್ಟಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಸಮೀರ್ ವಿರುದ್ಧ ಎಫ್‌ಐಆರ್ ದಾಖಲು
ವೃದ್ದನನ್ನು ರಕ್ಷಣೆ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿರೂಪಾಕ್ಷ ಬೆಳಗುತ್ತಿಯವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚಿಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಶಿವಮೊಗ್ಗ | ಸೇತುವೆ ಮೇಲೆ ಚಲಿಸುತ್ತಿದ್ದಾಗ ಬೇರ್ಪಟ್ಟ ರೈಲಿನ ಬೋಗಿಗಳು!