ಬಾಗಲಕೋಟೆ: ಜಿಲ್ಲೆಯ ಜಿಲ್ಲೆ ತೇರದಾಳ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಪ್ರವಾಹದಿಂದಾಗಿ ಕಂಬ ಏರಿ ಕುಳಿತ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ.
ರಮೇಶ್ ಪೂಜೇರಿ ವಿದ್ಯುತ್ ಕಂಬ ಏರಿ ರಕ್ಷಣೆಗಾಗಿ ಕಾದಿದ್ದ ವ್ಯಕ್ತಿ. ಇವರು ಪ್ರವಾಹ ತಗ್ಗಿದ ಹಿನ್ನೆಲೆಯಲ್ಲಿ ಗ್ರಾಮದ ಕಡೆಗೆ ಹೊರಟಿದ್ದರು. ಈ ಸಂದರ್ಭ ಮಧ್ಯದಲ್ಲಿ ನೀರಿನ ಸೆಳೆತ ಹೆಚ್ಚಿದ್ದರಿಂದ ರಮೇಶ್ ತನ್ನ ಜೀವ ಉಳಿಸಿಕೊಳ್ಳಲು ವಿದ್ಯುತ್ ಕಂಬ ಏರಿದ್ದಾರೆ.
Advertisement
ನಂತರ ರಮೇಶ್ ನನ್ನು ಗಮನಿಸಿದ ಪೊಲೀಸರು ಹಾಗೂ ಸ್ಥಳೀಯರು ಬೋಟ್ ಮೂಲಕ ಸ್ಥಳಕ್ಕೆ ತೆರಳಿ ಅವರನ್ನು ರಕ್ಷಣೆ ಮಾಡಿದ್ದಾರೆ.
Advertisement
Advertisement