ಲಕ್ನೋ: ಚಾಕಲೇಟ್ (Chocolate) ಕೊಡಿಸುವುದಾಗಿ ಆಮಿಷವೊಡ್ಡಿ ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ (Rape) ಘಟನೆ ಉತ್ತರಪ್ರದೇಶದ (Uttar Pradesh) ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಉತ್ತರಪ್ರದೇಶದ ಬರೇಲಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿಯು ತನ್ನ ಸ್ನೇಹಿತರೊಂದಿಗೆ ಹೊರಗಡೆ ಆಡುತ್ತಿದ್ದಳು. ಈ ವೇಳೆ ಚಾಕಲೇಟ್ ಕೊಡುವ ನೆಪದಲ್ಲಿ 25 ವರ್ಷದ ಯುವಕ ಬಾಲಕಿಯನ್ನು ಕರೆದಿದ್ದಾನೆ. ಅದಾದ ಬಳಿಕ ಬಾಲಕಿಯನ್ನು ಆತ ಯಾರೂ ಇಲ್ಲದ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.
ಘಟನೆ ವೇಳೆ ಅತ್ಯಾಚಾರ ಸಂತ್ರಸ್ತೆಯ ತಂದೆ ಗುತ್ತಿಗೆ ಕಾರ್ಮಿಕನಾಗಿದ್ದರಿಂದ ಕೆಲಸಕ್ಕೆ ಹೋಗಿದ್ದ ಹಾಗೂ ಆಕೆಯ ತಾಯಿ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಅದಾದ ಬಳಿಕ ತಾಯಿಯು ಮನೆಗೆ ಮರಳಿದಾಗ ಬಾಲಕಿ ನಾಪತ್ತೆ ಆಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮಗಳನ್ನು ಮಹಿಳೆಯು ಹುಡುಕಲು ಪ್ರಾರಂಭಿಸಿದ್ದಾಳೆ. ಇದನ್ನೂ ಓದಿ: ರಾಜ್ಯ ರಾಜಕಾರಣಕ್ಕೆ ರಮ್ಯಾ ವಾಪಸ್ – ಬೆಂಗಳೂರಿನಿಂದ ಕಣಕ್ಕೆ?
ಈ ವೇಳೆ ಮಹಿಳೆ ದೂರದಲ್ಲಿ ಮಗಳು ಅಳುತ್ತಿರುವುದನ್ನು ಕೇಳಿದ್ದಾಳೆ. ಈ ವೇಳೆ ಬಾಲಕಿಯು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಜೊತೆಗೆ ಕೃತ್ಯವೆಸಗಿದ ಬಳಿಕ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬಾಲಕಿಯ ತಾಯಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ದರ್ಗಾ ಹೋಲುವ ಕಟ್ಟಡ – ತೆರವಿಗೆ ಸಂಸದ ಪತ್ರ